ಬಿಗ್‌ಬಾಸ್ ಮನೆಯಲ್ಲಿ “ನನಗೆ ಮರ್ಯಾದೆ ಸಿಕ್ಕಿಲ್ಲ” ಎಂದು ಆರೋಪಿಸಿ ರಾದ್ಧಾಂತ ಸೃಷ್ಟಿಸಿದ್ದ ಅಶ್ವಿನಿ ಗೌಡರಿಗೆ, ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಗಟ್ಟಿಯಾಗಿ ಕ್ಲಾಸ್ ತೆಗೆದುಕೊಂಡಿರುವ ಪ್ರೋಮೊ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.
ಅಶ್ವಿನಿ ವಿಚಾರದಲ್ಲಿ ಸುದೀಪ್ ಮೌನವಾಗಿದ್ದಾರೆ ಎಂಬ ಅಭಿಪ್ರಾಯಗಳು ನೆಟ್ಟಿಗರಲ್ಲಿ ವ್ಯಕ್ತವಾಗಿದ್ದಾಗಲೇ, ಇತ್ತೀಚಿನ ಪ್ರೋಮೊ ಆ ಆರೋಪಕ್ಕೆ ತೆರೆ ಎಳೆಯುವಂತೆ ಮಾಡಿದೆ. ಕಿಚ್ಚ, ಅಶ್ವಿನಿಯ ವರ್ತನೆಗೆ ಸಿಟ್ಟಿನಿಂದ ಪ್ರತಿಕ್ರಿಯಿಸಿದ್ದಾನೆ.
ಕ್ಯಾಪ್ಟನ್ ಆಗಿದ್ದ ರಘು ಮನೆ ಕೆಲಸಕ್ಕೆ ಅಶ್ವಿನಿ ಅವರನ್ನು “ಬನ್ನಿ ಅಶ್ವಿನಿ, ಕೆಲಸ ಮಾಡಬನ್ನಿ” ಎಂದು ಕರೆದಿದ್ದಕ್ಕೆ, ಅದನ್ನೇ ಅವಮಾನವೆಂದೂ, ತಮ್ಮ “ಸೊಸೈಟಿ ಸ್ಟೇಟಸ್‌ಗೆ ಧಕ್ಕೆ” ಎಂದೂ ಅಶ್ವಿನಿ ಬಿಗ್‌ಬಾಸ್ ಮನೆಯಲ್ಲಿ ದೊಡ್ಡ ರಾದ್ಧಾಂತ ಮಾಡಿದ್ದರು. ಕಣ್ಣೀರು ಹಾಕಿ ಊಟ ಬಿಟ್ಟು, ಮನೆಯಿಂದ ಹೊರಗೆ ಹೋಗುವುದಾಗಿ ಹೇಳಿ ಸಂಚಲನ ಸೃಷ್ಟಿಸಿದ್ದರು.
ಈ ಘಟನೆ ಕುರಿತು ವಾರದ ಪಂಚಾಯಿತಿಯಲ್ಲಿ ಮಾತನಾಡಿದ ಕಿಚ್ಚ, ಅಶ್ವಿನಿಯನ್ನು ನೇರವಾಗಿ ಪ್ರಶ್ನಿಸಿದರು—
“ಏಕವಚನ, ಏಕವಚನ, ಏಕವಚನ… ನಿಮಗೆ ‘ಹೋಗಿ ಬನ್ನಿ’ ಅನ್ನೋದರಲ್ಲೇ ತೊಂದರೆ ಇದ್ದರೆ, ಪ್ರತಿ ಮಗುವಿಗೂ ಹೋಗಿಬನ್ನಿ ಅಂತ ಹೇಳ್ತಾರೆ. ಇಲ್ಲಿ ಯಾರು ಏನು ತಪ್ಪು ಮಾತಾಡಿದ್ದಾರೆ?” ಎಂದು ಕಿಚ್ಚ ಖಾರವಾಗಿ ಕೇಳಿದರು.
“ಹೆಣ್ಣುಮಕ್ಕಳಲ್ಲಿ ಯಾರಾದರೂ ಅಶ್ವಿನಿ ಗೌಡ ನಿಮ್ಮನ್ನು ಮಾನ-ಮರ್ಯಾದೆಯ ಜೊತೆಗೆ ನಡೆದುಕೊಂಡಿದ್ದಾರೆ ಅನ್ನೋದು ಇದ್ದರೆ ಕೈ ಎತ್ತಿ” ಎಂದು ಕಿಚ್ಚ ಕೇಳಿದಾಗ, ಯಾರೊಬ್ಬರೂ ಕೈ ಎತ್ತದೇ ನಿಶ್ಬ್ದವಾಗಿದ್ದರು. ಅದರ ನಂತರ ಕಿಚ್ಚ ಅಂತಿಮವಾಗಿ ಎಚ್ಚರಿಕೆ ನೀಡಿದರು— “ಅಶ್ವಿನಿಯವ್ರೇ, ಈ ಮನೆಯಲ್ಲಿ ವುಮೆನ್ ಕಾರ್ಡ್ ಬೇಡ!” ಎಂದು ಎಚ್ಚರಿಕೆ ನೀಡಿದ್ದಾರೆ.
ಕಿಚ್ಚ ಸುದೀಪ್‌ನ ಈ ಗಟ್ಟಿಯಾದ ಕ್ಲಾಸ್, ಅಶ್ವಿನಿಯ ಏಕವಚನ ರಾದ್ಧಾಂತ ವಿವಾದಕ್ಕೆ ಸ್ಪಷ್ಟ ತೆರೆ ಎಳೆದಂತಾಗಿದೆ.


