ವಿಜಯಸಾಕ್ಷಿ ಸುದ್ದಿ, ಗದಗ : ಗದಗ-ಬೆಟಗೇರಿ ನಗರಸಭೆಯ ಸಭಾಭವನದಲ್ಲಿ ಗದಗ-ಬೆಟಗೇರಿ ನಗರಸಭೆಯ ನೂತನ ನಾಮನಿರ್ದೇಶಿತ ಸದಸ್ಯರ ಪದಗ್ರಹಣ ಕಾರ್ಯಕ್ರಮ ಬುಧವಾರ ಜರುಗಿತು. ನೂತನ ನಾಮನಿರ್ದೇಶಿತ ಸದಸ್ಯರಾದ ಮೋಹನ ಕಟ್ಟಿಮನಿ, ಬಾಬಾ ನರಸಾಪುರ, ದುರಗಪ್ಪ ವಿಭೂತಿ ಇವರನ್ನು ಮಾಜಿ ಶಾಸಕರಾದ ಡಿ.ಆರ್. ಪಾಟೀಲ ಸನ್ಮಾನಿಸಿ ಅಭಿನಂದಿಸಿದರು.
Advertisement
ಈ ಸಂದರ್ಭದಲ್ಲಿ ಪ್ರಭು ಬುರಬುರೆ, ಗುರಣ್ಣ ಬಳಗಾನೂರ, ಎಲ್.ಡಿ. ಚಂದಾವರಿ, ಬಿ.ಬಿ. ಅಸೂಟಿ, ನಗರಸಭೆ ಸದಸ್ಯರಾದ ಸುರೇಶ ಕಟ್ಟಿಮನಿ, ಬರಕತಅಲಿ ಮುಲ್ಲಾ, ಎಸ್.ಎನ್. ಬಳ್ಳಾರಿ, ನಮಾಜಿ, ಸಿದ್ದಮ್ಮನಹಳ್ಳಿ, ಮುನ್ನಾ ರೇಶ್ಮಿ, ಅಶೋಕ ಮಂದಾಲಿ, ಮಾರ್ತಂಡಪ್ಪ ಹಾದಿಮನಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು.