ದೊಡ್ಡ ಸಂಭಾವನೆಗಿಂತ ಒಳ್ಳೆಯ ಪ್ರಾಜೆಕ್ಟ್ ನನಗೆ ಮುಖ್ಯ ಎಂದು ಗಾಯಕ ಗುರು ಕಿರಣ್ ಹೇಳಿದ್ದಾರೆ. ಗುರು ಕಿರಣ್ ಅವರು ಸಿನಿಮಾ ಮಾಡಲು ಕಡಿಮೆ ಮಾಡಿದ್ದು ಏಕೆ ಎಂಬ ಪ್ರಶ್ನೆಗೆ ಅವರ ಕಡೆಯಿಂದಲೇ ಉತ್ತರ ಸಿಕ್ಕಿದೆ. ದೊಡ್ಡ ಸಂಭಾವನೆ ನೀಡುತ್ತೇನೆ ಎಂದ ಮಾತ್ರಕ್ಕೆ ತಾವು ಸಿನಿಮಾ ಮಾಡಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಅವರು ಕಾರಣವನ್ನೂ ವಿವರಿಸಿದ್ದಾರೆ.
ಸಿನಿಮಾ ಕಮ್ಮಿ ಮಾಡಿದ್ದೇನೆ. ನನಗೆ ದುಡ್ಡು ಕೊಟ್ಟು ಸಿನಿಮಾ ಮಾಡಿಸಿಕೊಳ್ಳೋಕೆ ಆಗಲ್ಲ. ಪ್ರಾಜೆಕ್ಟ್ ಇಷ್ಟ ಆಗಬೇಕು. ದೊಡ್ಡ ಪ್ರಾಜೆಕ್ಟ್ ಒಂದು ಪ್ಯಾಟರ್ನ್ನಲ್ಲಿ ಹೋಗ್ತಾ ಇದೆ. ಸಣ್ಣ ಚಿತ್ರಗಳು ಹೋಗ್ತಾ ಇಲ್ಲ. ಇದಕ್ಕೆ ಚಿತ್ರರಂಗ ಗುರಿಯಾಗುತ್ತಿದೆ. ಒಳ್ಳೆಯ ಸಿನಿಮಾಗಳು ಬರುತ್ತಿಲ್ಲ. ಮೊದಲಿನಷ್ಟು ಖುಷಿ ಸಿಗುತ್ತಿಲ್ಲ. ಹೀಗಾಗಿ ಒಂದು ಬ್ರೇಕ್ ಕೊಡೋಣ ಅಂತ’ ಎಂದು ಹೇಳಿದ್ದಾರೆ.
ಸಂಗೀತ ನಿರ್ದೇಶಕ, ಗಾಯಕ ಗುರು ಕಿರಣ್ ಅವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಹೊಂದಿದ್ದರು. ಇತ್ತೀಚೆಗೆ ಅವರು ಸಿನಿಮಾಗಳನ್ನು ಮಾಡೋದು ಕಡಿಮೆ ಮಾಡಿದ್ದಾರೆ. ಅಲ್ಲೊಂದು, ಇಲ್ಲೊಂದು ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುವ ಕೆಲಸವನ್ನು ಅವರು ಮಾಡುತ್ತಿದ್ದಾರೆ.