ಅಜಯ್‌ ದೇವಗನ್‌ಗೆ ಸಿನಿಮಾ ಮಾಡ್ತಿಲ್ಲ: ‘ಸು ಫ್ರಮ್ ಸೋ’ ನಿರ್ದೇಶಕ ಜೆಪಿ ತುಮಿನಾಡು ಸ್ಪಷ್ಟನೆ

0
Spread the love

ಸು ಫ್ರಮ್ ಸೋಡೈರೆಕ್ಟರ್ ಜೆಪಿ ತುಮಿನಾಡ್ ಸದ್ಯ ಸಖತ್‌ ಸದ್ದು ಮಾಡ್ತಿದ್ದಾರೆ. ‘ಸು ಫ್ರಮ್ ಸೋ‘ ಸಿನಿಮಾದ ಮೂಲಕ ತುಮಿನಾಡ್‌ ಪರಭಾಷೆಯಲ್ಲೂ ಸದ್ದು ಮಾಡ್ತಿದ್ದಾರೆ. ಈ ಮಧ್ಯೆ ತುಮಿನಾಡು ಅವರಿಗೆ ಬಾಲಿವುಡ್‌ ಚಿತ್ರರಂಗದಿಂದ ಆಫರ್‌ ಬಂದಿದ್ದು ಅಜಯ್‌ ದೇವಗನ್‌ ಗೆ ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಈ ಬಗ್ಗೆ ತುಮಿನಾಡು ಸ್ಪಷ್ಟನೆ ನೀಡಿದ್ದು ಅಜಯ್‌ ದೇವಗನ್‌ ಅವರಿಗೆ ನಿರ್ದೇಶನ ಮಾಡುತ್ತಿಲ್ಲ ಎಂದಿದ್ದಾರೆ.

Advertisement

ಇತ್ತೀಚೆಗೆ ‘ಸು ಫ್ರಮ್‌ ಸೋ’ ಸಿನಿಮಾದ ಪ್ರಚಾರಕ್ಕಾಗಿ ಹೈದರಾಬಾದಿನಲ್ಲಿದ್ದಾಗ ಅಜಯ್‌ ದೇವಗನ್‌ ಅವರ ಆಫೀಸಿನಿಂದ ಕರೆ ಬಂತು. ಅವರನ್ನು ಭೇಟಿಯಾಗಬಹುದಾ ಅಂತ. ಹೀಗೆ ಫಿಕ್ಸ್‌ ಆದ ಭೇಟಿಯಲ್ಲಿ ಅಜಯ್‌ ದೇವಗನ್ ಅವರು ನಮ್ಮ ಸಿನಿಮಾದ ಬಗ್ಗೆ ಮೆಚ್ಚಿ ಮಾತನಾಡಿ, ಸಿನಿಮಾದಲ್ಲಿ ಉತ್ತಮ ಮನರಂಜನೆ ಇದೆ. ಕೊನೆಯ ಅಂಶ ಮನಸ್ಸಿಗೆ ತಟ್ಟಿತು ಎಂದೆಲ್ಲ ಪ್ರಶಂಸೆ ಮಾಡಿದರು.

ಮುಂದೆ ನೀವು ಸಿನಿಮಾ ಮಾಡೋದಿದ್ದರೆ ಹಿಂದಿಯಲ್ಲೂ ಏಕಕಾಲಕ್ಕೆ ಬಿಡುಗಡೆ ಮಾಡುವ ಪ್ಲಾನ್‌ ಮಾಡಿ. ಹಂಚಿಕೆಯ ವಿಚಾರದಲ್ಲಿ ನಾವು ನಿಮ್ಮ ಜೊತೆಗಿರುತ್ತೇವೆ ಎಂಬ ಭರವಸೆಯನ್ನೂ ನೀಡಿದ್ದಾರೆ. ಆದರೆ ಈಗ ಸೋಷಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವಂತೆ, ನನಗೆ ಸ್ಕ್ರಿಪ್ಟ್‌ ಮಾಡಿ, ಡೈರೆಕ್ಷನ್‌ ಮಾಡಿ ಅಂತೆಲ್ಲ ಅಜಯ್‌ ದೇವಗನ್‌ ಹೇಳಿಲ್ಲ ಎಂದು ತುಮಿನಾಡ್‌ ಸ್ಪಷ್ಟನೆ ನೀಡಿದ್ದಾರೆ.

‘ಸು ಫ್ರಮ್‌ ಸೋ’ ಸಿನಿಮಾದಲ್ಲಿನ ನನ್ನ ಪಾತ್ರವನ್ನು ನೋಡಿ ತೆಲುಗು, ಮಲಯಾಳಂ ಮೊದಲಾದ ಭಾಷೆಗಳಿಂದ ನಟನೆಗೆ ಆಫರ್‌ಗಳು ಬರುತ್ತಿವೆ. ನಟನೆಯೂ ನನ್ನ ಆಸಕ್ತಿಯೇ ಆಗಿರುವ ಕಾರಣ ಈ ಬಗ್ಗೆ ಸ್ವಲ್ಪ ದಿನದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.

ನನ್ನ ಮೊದಲ ಮರ್ಯಾದೆ ಸ್ಕ್ರಿಪ್ಟಿಗೇ. ಇಷ್ಟಾದರೂ ನನಗೊಂದು ಕನ್ನಡದಲ್ಲಿಯೇ ಸರಿಯಾದ ಸಿನಿಮಾ ಮಾಡಬೇಕು ಅಂತಿದೆ. ಚಿತ್ರರಂಗ ಏನನ್ನೋ ನಿರೀಕ್ಷಿಸುತ್ತಿದ್ದ ಸಮಯಕ್ಕೆ ಸರಿಯಾಗಿ ಬಂದ ಕಾರಣ ‘ಸು ಫ್ರಂ ಸೋ’ ಸಿನಿಮಾ ಕ್ಲಿಕ್‌ ಆಗಿರಬಹುದು. ನನಗೆ ನನ್ನ ಸಿನಿಮಾವನ್ನು ಜಗತ್ತೇ ತಿರುಗಿ ನೋಡಬೇಕು ಅನ್ನೋದೆಲ್ಲ ಇಲ್ಲ. ನನ್ನ ಮನೆಯವರು, ನನ್ನೂರಿನ ಜನ ಥೇಟರಿನಲ್ಲಿ ಚಿತ್ರ ನೋಡಿ ಕೊನೆಯಲ್ಲಿ ಖುಷಿಯಲ್ಲಿ ಆಚೆ ಬರಬೇಕು. ಸಿನಿಮಾ ಬಲ್ಲವರ ಕೈಯಲ್ಲಿ ಹೊಗಳಿಸಿಕೊಳ್ಳುವ ಆಸೆ ನನಗಿಲ್ಲ. ಟೈಟಾನಿಕ್‌ ಸಿನಿಮಾವನ್ನೂ ಟೀಕಿಸುವವರಿದ್ದಾರೆ. ನನಗಿರುವುದು ನನ್ನೂರ ಜನ ಮೆಚ್ಚುವ ಸಿನಿಮಾ ಮಾಡಬೇಕು ಅನ್ನೋದಷ್ಟೇ ಎಂದು ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here