ಸಿಹಿ ಖಾದ್ಯ ಅಥವಾ ತಿಂಡಿಗಳಲ್ಲಿ ಏಲಕ್ಕಿ ಹೆಚ್ಚಾಗಿ ಬಳಸುವರು. ಅದರಲ್ಲೂ ಬಿರಿಯಾನಿ ತಯಾರಿಸಲು ಈ ಸಣ್ಣ ಬೀಜವನ್ನು ಬಳಸಲೇಬೇಕು. ಆಗ ಮಾತ್ರ ಅದಕ್ಕೊಂದು ರುಚಿ ಬರುವುದು. ಏಲಕ್ಕಿಯಲ್ಲಿ ಕೂಡ ಎರಡು ವಿಧಗಳು ಇವೆ. ಒಂದು ಹಸಿರು ಮತ್ತೊಂದು ಕಂದು. ಇದರ ಸಿಪ್ಪೆಯು ಒಳ್ಳೆಯ ಸುವಾಸನೆ ಮತ್ತು ಸಿಹಿ ರುಚಿ ನೀಡುವುದು. ಕೆಲವು ಜನರು ಊಟದ ಬಳಿಕ ಏಲಕ್ಕಿ ಬಾಯಿಗೆ ಹಾಕಿಕೊಂಡು ಜಗಿಯುವರು. ಇದರಿಂದ ಬಾಯಿಯಿಂದ ದುರ್ವಾಸನೆ ಬರುವುದು ತಪ್ಪುತ್ತದೆ.
ಏಲಕ್ಕಿಯ ಪ್ರಯೋಜನಗಳು:
* ಮೂಲವ್ಯಾಧಿಗೆ… ಬೆಳಿಗ್ಗೆ ಎರಡು ಬಾಳೆಹಣ್ಣು ಮಧ್ಯಕ್ಕೆ ಸೀಳಿ ಹಸಿರು ಏಲಕ್ಕಿಯ ಪುಡಿಯನ್ನು ತುಂಬಿ ಇಡಬೇಕು. ರಾತ್ರಿ ಮಲಗುವ ಮುನ್ನ ಒಂದು ಬಾಳೆ ಹಣ್ಣು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಬಾಳೆ ಹಣ್ಣು ಸೇವಿಸುವುದು.
* ಬಾಯಿ ಹುಣ್ಣಿಗೆ… ದೊಡ್ಡ ಏಲಕ್ಕಿ ಪುಡಿ ಜೇನುತುಪ್ಪ ಸೇರಿಸಿ ಹಚ್ಚಬೇಕು.
* ದೊಡ್ಡ ಏಲಕ್ಕಿಯ ಕಷಾಯ ಮಾಡಿ ಬಾಯಿ ಮುಕ್ಕಳಿಸುವುದರಿಂದ ಹಲ್ಲು ನೋವು ವಸಡು ನೋವು ನಿವಾರಣೆಯಾಗುವುದು.
* ಅತಿಯಾದ ಬಿಕ್ಕಳಿಕೆ ಗೆ… ಎರಡು ದೊಡ್ಡ ಏಲಕ್ಕಿ ಎರಡು ಕಪ್ಪು ನೀರಿನಲ್ಲಿ ಕುದಿಸಿ ನೀರು ಕುದ್ದು ಅರ್ಧ ಆದಾಗ ಆರಿಸಿ ಕುಡಿಯಬೇಕು.
* ದೊಡ್ಡ ಏಲಕ್ಕಿ ಪುಡಿ, ಕಪ್ಪು ಉಪ್ಪು ಸೇರಿಸಿ ಸೇವಿಸಲು ಹೊಟ್ಟೆಯುಬ್ಬರ ಕಡಿಮೆಯಾಗುತ್ತದೆ.
* ದೊಡ್ಡ ಏಲಕ್ಕಿ ಕಾಳುಗಳು, ಕಲ್ಲಂಗಡಿ ಬೀಜಗಳು, ಕಲ್ಲು ಸಕ್ಕರೆ ಸೇರಿಸಿ ಪುಡಿ ಮಾಡಿ ಮೂರು ಗ್ರಾಂ ನಷ್ಟು ಚೂರ್ಣವನ್ನು ಸೇವಿಸಿದರೆ ಕಿಡ್ನಿ ಸ್ಟೋನ್ ಕರಗಿಸಲು ಸಹಕಾರಿಯಾಗಿದೆ.
* ಊಟದ ನಂತರ ಹಸಿರು ಏಲಕ್ಕಿ ಸೇವಿಸಿದರೆ ಜೀರ್ಣ ಶಕ್ತಿ ಹೆಚ್ಚುತ್ತದೆ, ಬಾಯಿಯ ದುರ್ಗಂಧ ದೂರವಾಗುತ್ತದೆ.
* ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
* ಏಲಕ್ಕಿ ಸೇವನೆ ಕ್ಯಾನ್ಸರ್ ಬರದಂತೆ ತಡೆಯುತ್ತದೆ.
* ಏಲಕ್ಕಿಯಲ್ಲಿ ಲೈಂಗಿಕ ಸಾಮರ್ಥ್ಯ ಹೆಚ್ಚಿಸುವ ಗುಣ ಇದೆ.
* ಬೆಲ್ಲ, ಹಸಿರು ಏಲಕ್ಕಿ ಪುಡಿ, ಸೋಂಪು ಕಾಳಿನ ಪುಡಿ, ಗಸಗಸೆ ಸೇರಿಸಿ ಮಣ್ಣಿನ ಗಡಿಗೆಯಲ್ಲಿ ತಯಾರಿಸಿದ ಪಾನಕ ಬಹಳ ತಂಪು. ಈ ಪಾನಕ ಕುಡಿದರೆ ಉರಿ ಮೂತ್ರ ನಿವಾರಣೆಯಾಗುತ್ತದೆ. ಆಯಾಸವೂ ದೂರವಾಗುತ್ತದೆ.