ಬೆಂಗಳೂರು:- ಮುಡಾದಲ್ಲಿ ಒಂದೆರಡಲ್ಲ, 4,000 ಕೋಟಿ ರೂ. ಲೂಟಿಯಾಗಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ. ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಮುಡಾದಲ್ಲಿ 3,000 ರಿಂದ 4,000 ಕೋಟಿ ರೂ. ಲೂಟಿಯಾಗಿದೆ. ಸಿಎಂ ಅವರ ಕುಟುಂಬ ಅಕ್ರಮವಾಗಿ 14 ಸೈಟ್‌ಗಳನ್ನು ಪಡೆದಿತ್ತು. ಈ ಕೇಸ್ ಮುಚ್ಚಿ ಹೋಗುತ್ತೇನೋ ಅಂತ ಜನಕ್ಕೆ ಅನಿಸಿತ್ತು. ಆದರೆ ಈಗ ದಿನೇಶ್ ಕುಮಾರ್ ಬಂಧನ ಆಗಿದೆ. ಇದರಿಂದ ಪ್ರಕರಣಕ್ಕೆ ಇನ್ನಷ್ಟು ಶಕ್ತಿ ಬಂದಿದೆ. ಇನ್ನಷ್ಟು ಬ್ರೋಕರ್‌ಗಳ ತನಿಖೆಯೂ ಆಗಬೇಕು ಎಂದರು
ಇದೇ ವೇಳೆ ವಿಜಯಪುರದಲ್ಲಿ ಬ್ಯಾಂಕ್ ಲೂಟಿ ವಿಚಾರವಾಗಿ ಮಾತನಾಡಿದ ಅವರು, ಮತ್ತೆ ರಾಜ್ಯದಲ್ಲಿ ಬ್ಯಾಂಕ್ ದರೋಡೆಗಳು ನಡಿಯುತ್ತಿವೆ. ಈ ಸರ್ಕಾರದ ಅವಧಿಯಲ್ಲಿ ದರೋಡೆಕೋರರಿಗೆ ಹಬ್ಬದ ವಾತಾವರಣ ಇದ್ದಂತೆ. ಜೊತೆಗೆ ಕಾಂಗ್ರೆಸ್‌ನವರು ನೀವು ಲೂಟಿ ಮಾಡಿ, ನಮಗೆ ಕಮಿಷನ್ ಕೊಡಿ ಅಂತಾರೆ. ಆಡಳಿತ ಹದಗೆಟ್ಟು ಹೋಗಿದೆ, ದುಡ್ಡಿಲ್ಲದೇ ಸರ್ಕಾರ ಪಾಪರ್ ಆಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ವಾಗ್ದಾಳಿ ನಡೆಸಿದರು
ಸಿದ್ದರಾಮಯ್ಯ ಜಾತಿ ಒಡೆಯುವುದರಲ್ಲಿ ಫೇಮಸ್. ನಮ್ಮ ಸರ್ಕಾರ ಬಂದ ನಂತರ ಸಿದ್ದರಾಮಯ್ಯಗೆ ಸನ್ಮಾನ ಮಾಡ್ತೇವೆ. ಕುಲ ಕುಲ ಅಂತ ಹೊಡೆದಾಡಬೇಡಿ ಅಂತ ಕನಕದಾಸರು ಹೇಳಿದ್ದಾರೆ. ಆದರೆ ಸಿದ್ದರಾಮಯ್ಯ ಕುಲ ಕುಲ ಅಂತ ಹೊಡೆದಾಡಿ ಅಂತಿದ್ದಾರೆ. ಇದೀಗ 52 ಹೊಸ ಜಾತಿಗಳನ್ನು ಸೇರಿಸಿದ್ದಾರೆ. ಒಕ್ಕಲಿಗರು ಸೇರಿ ಎಲ್ಲ ಜಾತಿಗಳಲ್ಲೂ ಕ್ರಿಶ್ಚಿಯನ್‌ಗಳನ್ನು ಹುಟ್ಟು ಹಾಕಿದ್ದಾರೆ. ಇದರ ವಿರುದ್ಧ ಒಕ್ಕಲಿಗರು ಸೇರಿಕೊಂಡು ಸದ್ಯದಲ್ಲೇ ಸಭೆ ಮಾಡ್ತೀವಿ. ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸುತ್ತಾರೆ. ಸಿದ್ದರಾಮಯ್ಯ ಧರ್ಮ ಒಡೆಯುವ ಕೆಲಸಕ್ಕೆ ಕೈಹಾಕಿ ಈಗಾಗಲೇ ಕೈಸುಟ್ಟುಕೊಂಡಿದ್ದಾರೆ ಎಂದು ತಿಳಿಸಿದರು


