HomeLife StyleHealth Tips: ರುಚಿಗಷ್ಟೇ ಅಲ್ಲ ಆರೋಗ್ಯಕ್ಕೂ ಬಹಳ ಒಳ್ಳೆಯದು ತೊಂಡೆಕಾಯಿ! ಇಲ್ಲಿದೆ ನೋಡಿ ಡಿಟೈಲ್ಸ್

Health Tips: ರುಚಿಗಷ್ಟೇ ಅಲ್ಲ ಆರೋಗ್ಯಕ್ಕೂ ಬಹಳ ಒಳ್ಳೆಯದು ತೊಂಡೆಕಾಯಿ! ಇಲ್ಲಿದೆ ನೋಡಿ ಡಿಟೈಲ್ಸ್

For Dai;y Updates Join Our whatsapp Group

Spread the love

ಸಾಮಾನ್ಯವಾಗಿ ನಮ್ಮೆಲ್ಲರಿಗೂ ಸೌತೆಕಾಯಿ ಕುಂಬಳಕಾಯಿ, ಕಲ್ಲಂಗಡಿ ಹಣ್ಣುಗಳ ಬಗ್ಗೆ ತಿಳಿದೇ ಇರುತ್ತದೆ. ಆದರೆ ಜಾತಿಗೆ ಸೇರಿದ, ಹೆಚ್ಚೆಂದರೆ ಒಬ್ಬ ಮನುಷ್ಯನ ಹೆಬ್ಬೆರಳಿನ ಗಾತ್ರದಷ್ಟು ಉದ್ದವಿರುವ ಇನ್ನೊಂದು ತರಕಾರಿ ಇದೆ ಎಂದರೆ ಅದು ತೊಂಡೆಕಾಯಿ,

ಬಹುತೇಕ ಮಂದಿಗೆ ತೊಂಡೆಕಾಯಿಯೊಳಗೆ ಇರುವ ಅಂಟಾದ ದ್ರವ ಇಷ್ಟವಿಲ್ಲ. ಹಾಗಾಗಿ ಈ ತರಕಾರಿ ಕಂಡರೆ ಮುಖ ಮುರಿಯುತ್ತಾರೆ. ಆದರೆ ತೊಂಡೆಕಾಯಿಯಲ್ಲಿರುವ ಆರೋಗ್ಯ ಪ್ರಯೋಜನ ಬಗ್ಗೆ ತಿಳಿದರೆ, ಇದನ್ನು ಹೆಚ್ಚಾಗಿ ಸೇವಿಸಲು ಆರಂಭಿಸುತ್ತಾರೆ.

ಕ್ಯಾನ್ಸರ್ ನಿಂದ ರಕ್ಷಣೆ: ತೊಂಡೆಕಾಯಿಗಳಿಂದ ಕೇವಲ ಮೇಲಿನ ಸಣ್ಣ ಪುಟ್ಟ ಉಪಯೋಗಗಳು ಮಾತ್ರ ಲಭ್ಯವಾಗುತ್ತವೆ ಎಂದು ನೀವು ತಿಳಿದುಕೊಂಡಿದ್ದರೆ, ಖಂಡಿತ ಅದು ತಪ್ಪು. ಗುಣಪಡಿಸಲಾಗದ ಕ್ಯಾನ್ಸರ್ ರೋಗದ ವಿರುದ್ಧ ಹೊರಡುವಂತಹ ಶಕ್ತಿ ತೊಂಡೆಕಾಯಿಗಳಿಗೆ ಇದೆ ಎಂದು ಕಂಡು ಬಂದಿದೆ.

ಇದರಲ್ಲಿರುವ ಹೇರಳವಾದ ನೈಸರ್ಗಿಕ ಆಂಟಿ – ಆಕ್ಸಿಡೆಂಟ್ ಅಂಶಗಳು ಮನುಷ್ಯನ ದೇಹವನ್ನು ಫ್ರೀ ರಾಡಿಕಲ್ ಗಳ ಹಾವಳಿಯಿಂದ ಕಾಪಾಡುತ್ತದೆ. ಇದರಿಂದ ದೇಹದಲ್ಲಿ ಜೀವಕೋಶಗಳಿಗೆ ಮತ್ತು ಡಿ ಎನ್ ಎ ಅಂಶಗಳಿಗೆ ಹಾನಿಯಾಗುವುದು ತಪ್ಪುತ್ತದೆ.

ಸುಸ್ತು ಕಡಿಮೆ ಮಾಡಲು: ದೇಹದಲ್ಲಿ ಕಬ್ಬಿಣದಾಂಶ ಕಡಿಮೆ ಆದಾಗ ಸುಸ್ತು ಬೇಗ  ಆಗುತ್ತದೆ.   ತೊಂಡೆಕಾಯಿಯಲ್ಲಿ ಕಬ್ಬಿಣದಾಂಶ ಸಮೃದ್ಧವಾಗಿದೆ.  ಹಾಗಾಗಿ ಫಿಟ್ನೆಸ್ ಬೇಕಾದರೆ ನಿಮ್ಮ ಡಯಟ್ ನಲ್ಲಿ ತೊಂಡೆಕಾಯಿ ಇರಲಿ.

ಚರ್ಮದ ರಕ್ಷಣೆ: ತೊಂಡೆಕಾಯಿ ಸೇವನೆಯಿಂದ ಚರ್ಮ ಒರಟಾಗುವುದನ್ನು ತಡೆಯಬಹುದು. ಬಿಸಿಲಿನಿಂದ ಮುಖವು ಬಾಡಿದಂತೆ, ಒಣಗಿದಂತಾಗುತ್ತದೆ. ಇದನ್ನು ತಪ್ಪಿಸಲು ಪ್ರತಿ ಎರಡು ಹಸಿ ತೊಂಡೆಕಾಯಿ ತಿಂದರೆ ಚರ್ಮ ಒಣಗಿದಂತಾಗುವುದನ್ನು ತಡೆಯಬಹುದು.

ದೇಹದಲ್ಲಿ ಚರ್ಮ ಸಮಸ್ಯೆಗಳಾದ ಕಜ್ಜೆ, ಗಂದೆಗಳು ಉಂಟಾಗಿದ್ದರೆ ತೊಂಡೆಕಾಯಿಯಿಂದ ತಯಾರಿಸಿದ ಔಷಧ ರಾಮಬಾಣವಾಗಿ ಕೆಲಸ ಮಾಡುತ್ತದೆ. ದೇಹದಲ್ಲಿ ಉಂಟಾದ ಕಜ್ಜೆ, ಗಂದೆಗಳಾದ ಜಾಗದಲ್ಲಿ ತೊಂಡೆಕಾಯಿ ಜಜ್ಜಿ ಪೇಸ್ಟ್ ಮಾಡಿ ಗಂದೆ, ಕಜ್ಜೆಗಳು ವಾಸಿಯಾಗುತ್ತವೆ..

ಬೊಜ್ಜು ಕರಗಿಸಲು: ತೊಂಡೆಕಾಯಿ ಬಳ್ಳಿಯ ಕಾಂಡದ ರಸ ಬೊಜ್ಜು ಕರಗಲು ಲಕ್ಷ್ಮಣ ರೇಖೆಯಾಗಿದೆ. ಆಸೆ ಪಟ್ಟು ತಿಂದು ಹೊಟ್ಟೆ ಬೆಳೆಸಿಕೊಂಡವರಿಗೆ ಬೊಜ್ಜು ಕರಗಿಸಲು ಕಷ್ಟ ಪಡುತ್ತಾರೆ. ಬೊಜ್ಜು ಕರಗಿಸಲು ಲಕ್ಷ್ಮಣ ರೇಖೆಯಾಗಿದೆ.

ತೊಂಡೆಕಾಯಿ ಬಳ್ಳಿಯ ಕಾಂಡದ ಎರಡು ಚಮಚ ಪುಡಿಯನ್ನು ಒಂದು ಲೋಟ ನೀರಿನಲ್ಲಿ ಕುದಿಸಿ ಕಷಾಯ ಮಾಡಿಕೊಂಡು ಕುಡಿದರೆ ಕುಡಿದರೆ ದೇಹದ ಅನಗತ್ಯ ಕೊಬ್ಬು ಕರಗುತ್ತದೆ.

ನರಮಂಡಲ ರಕ್ಷಿಸುತ್ತದೆ:ತೊಂಡೆಕಾಯಿಯ ಆರೋಗ್ಯ ಮತ್ತು ಸೌಂದರ್ಯದ ಲಾಭಗಳುನರಗಳ ವ್ಯವಸ್ಥೆಯನ್ನು ರಕ್ಷಿಸುವ ಸಾಮರ್ಥ್ಯವನ್ನು ಈ ತರಕಾರಿ ಹೊಂದಿದೆ , ನರಮಂಡಲಕ್ಕೆ ಅಗತ್ಯವಾದ ಬಿ ಜೀವಸತ್ವದಿಂದ ಸಮೃದ್ಧವಾಗಿದೆ.

ದೇಹದಲ್ಲಿ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ: ತೊಂಡೆಕಾಯಿಯು ಥೈಯಾಮೈನ್ನ ಶ್ರೀಮಂತ ಮೂಲವಾಗಿದ್ದು, ಇದು ಕಾರ್ಬೋಹೈಡ್ರೇಟ್ ಅನ್ನು ಗ್ಲುಕೋಸ್ ಆಗಿ ಮಾರ್ಪಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ, ಇದು ದೇಹದಲ್ಲಿ ಶಕ್ತಿಯನ್ನು ಪರಿವರ್ತಿಸುವ ಪ್ರಮುಖ ಉತ್ಪನ್ನವಾಗಿ ಕಾರ್ಯನಿರ್ವಹಿಸುತ್ತದೆ.

 


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!