ಹುಣಸೆಹಣ್ಣು ಮಾತ್ರ ಅಲ್ಲ, ಅದರ ಬೀಜ ಕೂಡ ಆರೋಗ್ಯಕ್ಕೆ ಬಹಳ ಒಳ್ಳೆಯದಂತೆ!

0
Spread the love

ಹುಣಸೆ ಹಣ್ಣು ಎಂದ ತಕ್ಷಣ ಬಾಯಿಯಲ್ಲಿ ನೀರು ಬರುವುದು ಗ್ಯಾರಂಟಿ. ಅದೇನೋ ಗೊತ್ತಿಲ್ಲ. ನಮ್ಮ ಮೆದುಳು ಆ ರೀತಿಯ ಸಂಕೇತವನ್ನು ನಮ್ಮ ನಾಲಿಗೆಯ ಭಾಗಕ್ಕೆ ರವಾನಿಸುತ್ತದೆ ಎನಿಸುತ್ತದೆ. ಹುಳಿ ಮತ್ತು ಸ್ವಲ್ಪ ಸಿಹಿಯ ಮಿಶ್ರಣದ ಹುಣಸೆ ಹಣ್ಣು ಪ್ರತಿ ದಿನದ ಅಡುಗೆ ತಯಾರಿಯಲ್ಲಿ ಬೇಕೇ ಬೇಕು. ಹಲವಾರು ಔಷಧೀಯ ಗುಣ ಲಕ್ಷಣಗಳು ಸಹ ಹುಣಸೆ ಹಣ್ಣಿನಲ್ಲಿ ಕಂಡು ಬರುತ್ತವೆ.

Advertisement

ಹುಣಸೆ ಹಣ್ಣಿನ ಬೀಜದ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಿ.

ಕೀಲು ನೋವುಗಳಿಂದ ಬಳಲುತ್ತಿರುವವರು ಹುಣಸೆ ಹಣ್ಣಿನ ಬೀಜ ಉತ್ತಮ ಔಷಧವಾಗಿದೆ. ಹುಣಸೆ ಬೀಜಗಳನ್ನು ಚೆನ್ನಾಗಿ ತೊಳೆದು 2-3 ದಿನಗಳ ಕಾಲ ನೀರಿನಲ್ಲಿ ನೆನೆಸಿಡಿ. ಪ್ರತಿನಿತ್ಯವೂ ಸಹ ನೀರು ಬದಲಾಯಿಸುತ್ತಿರಿ. ನಂತರ ಮೇಲಿನ ಕೆಂಪು ಬಣ್ಣದ ಸಿಪ್ಪೆಯನ್ನು ಬಿಡಿಸಿ, ಒಳಗಿರುವ ಮತ್ತೊಂದು ಬೀಜವನ್ನು ಸಣ್ಣ ತುಂಡುಗಳನ್ನಾಗಿ ಮಾಡಿ ನೆರಳಿನಲ್ಲಿ ಒಣ ಹಾಕಿ.

ನಂತರ ಒಣಗಿದ ಬೀಜಗಳನ್ನು ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿ ಗಾಜಿನ ಪಾತ್ರೆಯಲ್ಲಿ ಶೇಖರಿಸಿಟ್ಟುಕೊಳ್ಳಿ. ನೀರಿನೊಂದಿಗೆ ಅಥವಾ ಹಾಲಿನೊಂದಿಗೆ ಅರ್ಧ ಚಮಚ ಪುಡಿಯನ್ನು ಸೇವಿಸುವುದರಿಂದ ಕೀಲು ನೋವು ಅಥವಾ ಮೊಣಕಾಲು ನೋವು ಬಹು ಬೇಗ ಗುಣವಾಗುತ್ತದೆ.

3-4 ವಾರಗಳವರೆಗೆ ನಿಮಗೆ ಚೇತರಿಕೆಯ ಗುಣಲಕ್ಷಣಗಳು ಕಂಡು ಬರುತ್ತವೆ. ಇದರಲ್ಲಿರುವ ಔಷಧೀಯ ಗುಣಗಳು ಮೂಳೆಗಳನ್ನು ಬಲಪಡಿಸುತ್ತದೆ. ಜತೆಗೆ ಅತಿಸಾರ, ಚರ್ಮ ರೋಗ, ಹಲ್ಲಿನ ತೊಂದರೆ ಮತ್ತು ಅಜೀರ್ಣ ಸಮಸ್ಯೆಗಳನ್ನು ಗುಣಪಡಿಸುವ ಔಷಧೀಯ ಗುಣಗಳನ್ನು ಹೊಂದಿದೆ.

ಕೆಮ್ಮು, ಗಂಟಲು ನೋವು, ಮಧುಮೇಹ, ಹೃದ್ರೋಗಗಳಿಗೂ ಇದು ಉತ್ತಮ ಔಷಧಿಯಾಗಿದೆ. ಹುಣಸೆ ಹಣ್ಣನ್ನು ಸಾಮಾನ್ಯವಾಗಿ ಚಾಕಲೇಟ್​-ಬಿಸ್ಕೇಟ್​ ತಯಾರಿಸಲು ಬಳಸುತ್ತಾರೆ. ಅಂಟು ತಯಾರಿಕೆಯಲ್ಲಿಯೂ ಹುಣಸೆ ಹಣ್ಣನ್ನು ಬಳಸುತ್ತಾರೆ.

 


Spread the love

LEAVE A REPLY

Please enter your comment!
Please enter your name here