ಬೆಂಗಳೂರು: ಮನೆ ಮಂಜೂರು ಮಾಡಲು ಹಣ ಪಡೆಯುವಷ್ಟು ದರಿದ್ರ ನಮ್ಮ ಸರ್ಕಾರಕ್ಕೆ ಬಂದಿಲ್ಲ ಎಂದು ಮಂಡ್ಯ ಶಾಸಕ ರವಿ ಗಣಿಗ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮನೆ ಮಂಜೂರು ಮಾಡಲು ಹಣ ಪಡೆಯುವಷ್ಟು ದರಿದ್ರ ನಮ್ಮ ಸರ್ಕಾರಕ್ಕೆ ಬಂದಿಲ್ಲ.
2022ರಲ್ಲಿ ಆಯ್ಕೆಯಾದವರಿಗೆ ಈಗ ಮನೆ ನೀಡಲಾಗುತ್ತಿದೆ. ಆಗ ಮನೆ ಮಂಜೂರಾಗಿದ್ದನ್ನು ಈಗ ಬದಲಾವಣೆ ಮಾಡಲು ಸಾಧ್ಯವಿಲ್ಲ. ಬಡವರಿಂದ ಹಣ ಪಡೆಯುವ ದರಿದ್ರ ಜಮೀರ್ಗಿಲ್ಲ. ಜಮೀರ್ ಸಾಕಷ್ಟು ದಾನ–ಧರ್ಮ ಮಾಡಿದ್ದಾರೆ ಎಂದು ಸಚಿವರ ಪರ ಬ್ಯಾಟಿಂಗ್ ಮಾಡಿದ್ದಾರೆ.



