ಬೆಳಗಾವಿ:- ಹುಬ್ಬಳ್ಳಿ ಮುಸ್ಲಿಂ ಸಮಾವೇಶದಲ್ಲಿ ತೆರಳಿದ್ದ ಸಿಎಂ ಮೇಲೆ ಬಿಜೆಪಿ ಶಾಸಕ ಯತ್ನಾಳ ಅವರು ಬೇರೆ ಉಗ್ರ ಸಂಘಟನೆಗಳೊಂದಿಗೆ ಲಿಂಕ್ ಮಾಡುವುದು ಸರಿಯಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
Advertisement
ಸಚಿವರುಗಳಿಗೆ ಸಾಕಷ್ಟು ಜನ ಮನವಿ ಕೊಡಲು ಬರುತ್ತಾರೆ. ಅವರು ಯಾರು ಅಂಥಾ ನಮಗೆ ಗೊತ್ತಾಗಬೇಕು. ಸಿಎಂ ಹುಬ್ಬಳ್ಳಿ ಮುಸ್ಲಿಂ ಸಮುದಾಯದ ಸಭೆಗೆ ಹೋದಾಗ ಅಲ್ಲಿಯ ವ್ಯಕ್ತಿಯ ಪಕ್ಕದಲ್ಲಿ ನಿಂತ ಮಾತ್ರಕ್ಕೆ ಸಿಎಂಗೂ ಉಗ್ರ ಸಂಘಟನೆ ಜೊತೆ ಲಿಂಕ್ ಮಾಡುವುದು ಸರಿಯಲ್ಲ. ಸಂಬಂಧಿಸಿದ ಇಲಾಖೆಯ ಅದನ್ನು ನೋಡಿಕೊಳ್ಳುತ್ತದೆ ಎಂದರು.