ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಅಂಬಿಗ, ಗಂಗಾಮತ, ಸುಣಗಾರ, ಬಾರಕೇರ ಸಮುದಾಯದ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಹಾಗೂ ಶಾಲಾ ಬ್ಯಾಗ್ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಗದಗ ಜಿಲ್ಲಾ ಅಂಬಿಗರ ಸಮಾಜದ ಪ್ರಧಾನ ಕಾರ್ಯದರ್ಶಿ ಸಂಗಮೇಶ ಹಾದಿಮನಿ ಸ್ವಾಗತಿಸಿ ಮಾತನಾಡಿ, ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿವರ್ಷ ನೋಟ್ಬುಕ್ ಹಾಗೂ ಬ್ಯಾಗ್ಗಳನ್ನು ಸಂಘಟನೆಯಿಂದ ಹಾಗೂ ಶಿಕ್ಷಣ ಪ್ರೇಮಿಗಳ ಸಹಾಯದಿಂದ ಉಚಿತವಾಗಿ ನೀಡುತ್ತಿದ್ದು, ಸಮುದಾಯದ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕು. ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸುವುದು ಮುಖ್ಯವಾಗಿದೆ. ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ತಾವೆಲ್ಲರೂ ಕೈ ಜೋಡಿಸಿ ಎಂದರು.
ಸಭೆಯ ಅಧ್ಯಕ್ಷತೆಯನ್ನು ಗದಗ ಜಿಲ್ಲಾ ನಿಜ ಶರಣ ಅಂಬಿಗರ ಚೌಡಯ್ಯ ಸಮಾಜದ ಜಿಲ್ಲಾಧ್ಯಕ್ಷ ರಾಮಣ್ಣ ಇರಕಲ್ಲ ವಹಿಸಿ ಮಾತನಾಡಿ, ತಮ್ಮೆಲ್ಲರ ಸಹಕಾರದಿಂದ ಸಾಮಾಜಿಕ ಕ್ರಿಯಾಶೀಲ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತ ಸಾಗಿರುವುದು ಸಂತಸ ತಂದಿದೆ. ಮುಂದಿನ ದಿನಮಾನಗಳಲ್ಲಿ ಸಂಘಟನೆಯ ವತಿಯಿಂದ ವಿವಿಧ ಕೌಶಲ್ಯ ತರಬೇತಿ ಕಾರ್ಯಾಗಾರ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಗದಗ ಜಿಲ್ಲಾ ಕೆಪಿಸಿಸಿ ಮೀನುಗಾರಿಕೆ ವಿಭಾಗದ ಜಿಲ್ಲಾಧ್ಯಕ್ಷ ಗುರಪ್ಪ ತಿರ್ಲಾಪೂರ, ಸಮಾಜದ ಉಪಾಧ್ಯಕ್ಷ ಪ್ರವೀಣ ನೀಲಣ್ಣವರ, ರವಿಕುಮಾರ ಗುಡಿಸಾಗರ, ಮಂಜುನಾಥ ಗುಡಿಸಾಗರ, ಹರೀಶ್ ಬಾರಕೇರ, ರಮೇಶ ಬೆಣಕಲ್ಲ, ಚಂದ್ರಶೇಖರ ಬಾರಕೇರ, ಮಹಿಳಾ ಅಧ್ಯಕ್ಷೆ ಸುಜಾತ ಗುಡಿಸಾಗರ, ಸುಜಾತಾ ಬಾರಕೇರ, ಸೌಮ್ಯಾ ಸುಣಗಾರ, ನಿಂಗಪ್ಪ ಇಟಗಿ, ಅಮಿತ ಪೂಜಾರ, ರಾಜು ಪೂಜಾರ, ಮಾರುತಿ ಬಾರಕೇರ, ಬಸವರಾಜ ನರಗುಂದ ಸೇರಿದಂತೆ ಸಮಾಜದ ಹಿರಿಯರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.