ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಶ್ರೀ ಡಾ. ಪಂಡಿತ ಪುಟ್ಟರಾಜ ಕವಿಗವಾಯಿಗಳರವರ 15ನೇ ಪುಣ್ಯಸ್ಮರಣೆಯ ಅಂಗವಾಗಿ ನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನಂ.13ರ ವಿದ್ಯಾರ್ಥಿಗಳಿಗೆ ಶ್ರೀ ಪಂಡಿತ ಪುಟ್ಟರಾಜ ಸಮಾಜಸೇವಾ ಟ್ರಸ್ಟ್ ವತಿಯಿಂದ ಉಚಿತವಾಗಿ ನೋಟಬುಕ್ ಮತ್ತು ಪೆನ್ನುಗಳನ್ನು ವಿತರಿಸಲಾಯಿತು.

Advertisement

ಈ ಸಂದರ್ಭದಲ್ಲಿ ಟ್ರಸ್ಟ್ನ ಅಧ್ಯಕ್ಷ ಸಿದ್ರಾಮಯ್ಯ ಕಟಗಿಹಳ್ಳಿಮಠ ಮಾತನಾಡಿ, ನಮ್ಮ ಟ್ರಸ್ಟ್ನ ವತಿಯಿಂದ ಶ್ರೀ ಡಾ. ಪಂಡಿತ ಪುಟ್ಟರಾಜ ಕವಿಗವಾಯಿಗಳವರ 15ನೇ ಪುಣ್ಯಸ್ಮರಣೆ ಅಂಗವಾಗಿ ಇದೊಂದು ಸಮಾಜಮುಖಿ ಕೆಲಸ ಮಾಡುತ್ತ ಪಂಡಿತ ಪುಟ್ಟರಾಜ ಗವಾಯಿಗಳ ಲಕ್ಷಾಂತರ ಬಡ ಅಂಧ ಅನಾಥ ಮಕ್ಕಳಿಗೆ ಆಶ್ರಯ ನೀಡಿ ಶಿಕ್ಷಣ, ಸಂಗೀತ ದಾಸೋಹ ನೀಡಿದ ಪೂಜ್ಯರ ಸ್ಮರಣೆಯ ಉದ್ದೇಶದಿಂದ ನಮ್ಮ ಟ್ರಸ್ಟ್ ಅಳಿಲು ಸೇವೆ ಸಲ್ಲಿಸುತ್ತಿದೆ ಎಂದರು.

ಈ ಸಂದರ್ಭದಲ್ಲಿ ಟ್ರಸ್ಟಿನ ಪದಾಧಿಕಾರಿಗಳಾದ ಬಸನಗೌಡ ಪಾಟೀಲ, ಗಂಗಾಧರ ಬೆಣಕಲ್ಲ, ಈಶಪ್ಪ ಅಂಗಡಿ, ಬಸವರಾಜ ಡಾವಣಗೇರಿ, ಮಹಾಂತೇಶ ಲಗಳಿ, ಮಂಜುನಾಥ ಖ್ಯಾಡದ, ಶರಣಪ್ಪ ಮೇಟಿ, ಭೀಮಪ್ಪ ಮೊಖಾಶಿ ಹಾಗೂ ಓಣಿಯ ಹಿರಿಯರಾದ ಶಿವಪ್ಪ ಲಗಳಿ, ಸುನೀಲ ಚಿನ್ನಾಪೂರ, ಪಟ್ಟದಕಲ್ಲ ಗುರುಗಳು, ಶಿವಯ್ಯ ಬೆಳ್ಳಿರಿಮಠ, ಈರಣ್ಣ ಸತ್ತಿಗೇರಿ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕಿಯರು, ಶಾಲೆಯ ಮಕ್ಕಳು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here