ಏನಿಲ್ಲ, ಏನಿಲ್ಲ.. ನಮ್ ದೇಶದಲ್ಲಿ ನೀರಿಲ್ಲ: ದೇಶದ ಮಾನ ಹರಾಜು ಮಾಡ್ತಿರುವ ಪಾಕ್ ಪ್ರಜೆಗಳು!

0
Spread the love

ಇಸ್ಲಾಮಾಬಾದ್:- ಪ್ರವಾಸಕ್ಕೆಂದು ಜಮ್ಮುಕಾಶ್ಮೀರಕ್ಕೆ ತೆರಳಿದ್ದ ಸರಿಸುಮಾರು 28 ಮಂದಿ ಭಾರತೀಯರನ್ನು ಉಗ್ರಗಾಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ನೀನು ಹಿಂದೂನಾ? ಎಂದು ಕೇಳಿ-ಕೇಳಿ ಗುಂಡು ಹಾರಿಸಿದ್ದಾರೆ. ಅಷ್ಟೇ ಅಲ್ಲದೇ ಪ್ಯಾಂಟ್ ಬಿಚ್ಚಿಸಿ ಹಿಂದೂ ಅಥವಾ ಮುಸ್ಲಿಂ ಎಂದು ಕನ್ಫರ್ಮ್ ಮಾಡಿಕೊಂಡು ಗುಂಡಿಕ್ಕಿ ಕೊಂದಿದ್ದಾರೆ. ಇನ್ನೂ ಈ ಘಟನೆಯನ್ನು ಇಡೀ ವಿಶ್ವವೇ ಖಂಡಿಸಿದ್ದು, ಭಾರತದ ನೆರವಿಗೆ ನಿಂತಿದೆ.

Advertisement

ಇನ್ನೂ ಈ ದಾಳಿ ನಡೆದ ಬೆನ್ನಲ್ಲೇ ಪಾಕ್ ಮೇಲೆ ಹಲವು ಕಠಿಣ ಕ್ರಮಗಳನ್ನು ಭಾರತ ದೇಶ ಕೈಗೊಂಡಿದೆ. ಪಹಲ್ಗಾಮ್‌ ಉಗ್ರರ ದಾಳಿ ಬಳಿಕ ಭಾರತದ ಪ್ರತೀಕಾರ ಹೆಚ್ಚಾಗುತ್ತಿದೆ. ಅದರಲ್ಲೂ ಭಾರತದಿಂದ ಪಾಕ್‌ಗೆ ಹರಿಯುವ ಸಿಂಧೂ, ಚೀನಾಬ್, ಜೀಲಂ ನದಿ ನೀರಿಗೆ ಬ್ರೇಕ್ ಹಾಕಲಾಗಿದೆ. ಇದರಿಂದಾಗಿ ಪಾಕಿಸ್ತಾನದಲ್ಲಿ ನೀರಿಲ್ಲದೆ ಹಾಹಾಕಾರದ ಪರಿಸ್ಥಿತಿ ನಿರ್ಮಾಣ ಆಗುವ ಸಾಧ್ಯತೆ ಇದೆ.

ಸಿಂಧೂ ನದಿ ನೀರನ್ನು ಭಾರತ ತಡೆದು ನಿಲ್ಲಿಸುತ್ತಿರೋದ್ರಿಂದ ಪಾಕಿಸ್ತಾನಿಗಳು ತಮ್ಮ ದೇಶವನ್ನು ತಾವೇ ಟ್ರೋಲ್ ಮಾಡಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪಾಕ್ ಜನರೇ ಬಗೆ, ಬಗೆಯ ಟ್ರೋಲ್‌, ಮಿಮ್ಸ್‌ಗಳನ್ನು ಮಾಡೋ ಮೂಲಕ ನಗೆಪಾಟಲಿಗೀಡಾಗಿದ್ದಾರೆ.

ಸ್ನಾನ ಮಾಡುವಾಗ ಕಣ್ಣಿಗೆ ಸೋಪಿನ ನೀರು ಹೋಗಿದೆ. ಪ್ಲೀಸ್ ನೀರು ಕೊಡಿ ಭಾರತ ಎಂದು ಓರ್ವ ಪಾಕಿಸ್ತಾನಿ ಹೇಳಿದ್ದಾನೆ. ಮತ್ತೊಬ್ಬ ಭಾರತ, ಪಾಕಿಸ್ತಾನದ ಮೇಲೆ ದಾಳಿ ಮಾಡಬಾರದು. ಏಕೆಂದರೆ ಪಾಕಿಸ್ತಾನ, ವಿಶ್ವದ ಎಲ್ಲಾ ದೇಶಗಳಿಗೂ ಸಾಲ ಕೊಡಬೇಕು ಎಂದಿದ್ದಾನೆ.

ಇನ್ನು ಹಲವು ಟ್ರೋಲ್ ಹಾಗೂ ಮೀಮ್ಸ್‌ಗಳ ಸಂದೇಶ ಚಿತ್ರ, ವಿಚಿತ್ರವಾಗಿದೆ. ಪಾಕಿಸ್ತಾನದ ಸರ್ಕಾರವೇ ಭಾರತ, ಪಾಕ್ ಅನ್ನು ಆಕ್ರಮಿಸಿಕೊಳ್ಳಲಿ ಅಂತ ಬಯಸುತ್ತಿದೆ. ಯಾಕೆಂದರೆ ಪಾಕ್ ಸರ್ಕಾರ ಆಗ ಸಾಲ ಮರು ಪಾವತಿಗೆ ಚಿಂತೆ ಮಾಡಬೇಕಾಗಿರೋದಿಲ್ಲ ಎಂದಿದ್ದಾರೆ.

ಭಾರತ ಯುದ್ಧ ಮಾಡುವುದಾದರೆ 9 ಗಂಟೆ ಒಳಗೆ ಮಾಡಿ. 9.15ರಿಂದ ಪಾಕಿಸ್ತಾನದಲ್ಲಿ ಗ್ಯಾಸ್ ಬಂದ್ ಆಗುತ್ತೆ. ಭಾರತಕ್ಕೆ ನಾವು ಎಂಥ ಬಡದೇಶದ ಮೇಲೆ ಯುದ್ಧ ಮಾಡುತ್ತಿದ್ದೇವೆ ಅಂತ ಗೊತ್ತಾಗಬೇಕು. ಭಾರತ, ಲಾಹೋರ್ ಅನ್ನೇ ತಗೊಳ್ಳುವುದಾದರೆ ತಗೊಳ್ಳಿ. ಆದರೆ ಅರ್ಧ ಗಂಟೆಯಲ್ಲಿ ಅದನ್ನು ನೀವೇ ವಾಪಸ್ ಕೊಡ್ತೀರಿ.

ನೀವು ನೀರು ನಿಲ್ಲಿಸುತ್ತೀರಾ, ಈಗಾಗಲೇ ಪಾಕ್‌ನಲ್ಲಿ ನೀರಿಲ್ಲ. ನೀವು ನಮ್ಮನ್ನು ಕೊಲ್ಲುತ್ತೀರಾ, ಈಗಾಗಲೇ ಪಾಕ್ ಸರ್ಕಾರವೇ ನಮ್ಮನ್ನು ಕೊಂದುಬಿಟ್ಟಿದೆ. ಕರಾಚಿಯ ಮೇಲೆ ದಾಳಿ ಮಾಡುತ್ತೀರಾ, ಹಾಗಾದರೆ ಭಾರತದಿಂದಲೇ ಮೊಬೈಲ್ ಫೋನ್ ತನ್ನಿ ಎಂದು ಮತ್ತೊಬ್ಬರು ಟ್ರೋಲ್ ಮಾಡುತ್ತಿದ್ದಾರೆ.

ಇಷ್ಟೆಲ್ಲಾ ಟ್ರೋಲ್ ಹಾಗೂ ಮೀಮ್ಸ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಪಾಕಿಸ್ತಾನದ ಮಾನ, ಮರ್ಯಾದೆಯನ್ನು ಹರಾಜು ಮಾಡಿದೆ. ಕೆಟ್ಟ ಮೇಲೆ ಬುದ್ಧಿ ಬಂತು ಅನ್ನೋ ಹಾಗೆ ಪಾಕಿಸ್ತಾನ ಇದೀಗ ಈ ಮೀಮ್ಸ್‌ ವಿಡಿಯೋಗಳನ್ನೇ ಬ್ಯಾನ್‌ ಮಾಡಿದೆ.


Spread the love

LEAVE A REPLY

Please enter your comment!
Please enter your name here