ಉಡುಪಿ:- ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಗೆ ಸರಣಿ ಅಪಘಾತವಾಗಿದ್ದು, ಬಳಿಕ ಸಿನಿಮಾ ಸ್ಟೈಲಲ್ಲಿ ನಟೋರಿಯಸ್ ಕ್ರಿಮಿನಲ್ ಓರ್ವನನ್ನು ಪೊಲೀಸರು ಅರೆಸ್ಟ್ ಮಾಡಿರುವ ಘಟನೆ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ಜರುಗಿದೆ.
ನೆಲಮಂಗಲ ಪೊಲೀಸರನ್ನು ಕಂಡು ಕಾರಿನಲ್ಲಿ ಪರಾರಿಯಾಗಲು ಆರೋಪಿ ಯತ್ನಿಸಿದ್ದ. ಬೆಂಬಿಡದೇ ಪೊಲೀಸರು ಚೇಸ್ ಮಾಡಿದ್ದಾರೆ. ತಕ್ಷಣ ಮಣಿಪಾಲ ಪೊಲೀಸರಿಗೆ ನೆಲಮಂಗಲ ಪೊಲೀಸರು ಮಾಹಿತಿ ನೀಡಿದ್ದಾರೆ.
ತಕ್ಷಣ ಕಾರ್ಯಪ್ರವೃತ್ತರಾದ ಮಣಿಪಾಲ ಪೊಲೀಸ್ ಇನ್‌ಸ್ಪೆಕ್ಟರ್ ದೇವರಾಜ್ ಅವರು, ಮಣಿಪಾಲದ ಮಣ್ಣ ಪಳ್ಳದ ಬಳಿ ಕ್ರಿಮಿನಲ್‌ನ ಬಂಧಿಸಿದ್ದಾರೆ. ಪೊಲೀಸರು ಬೆನ್ನಟ್ಟುವ ವೇಳೆ ನಾಲ್ಕು ಕಾರು
ಹಾಗೂ ಒಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ್ದ. ಕೊನೆಗೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಾರಿನಲ್ಲಿ ಆರೋಪಿ ಜೊತೆ ಓರ್ವ ಯುವತಿ ಪತ್ತೆಯಾಗಿದ್ದಾಳೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.