ಬೆಂಗಳೂರು:- ಬೆಂಗಳೂರು ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ಖದೀಮನನ್ನು ಉತ್ತರ ಪ್ರದೇಶದಲ್ಲಿ ಅರೆಸ್ಟ್ ಮಾಡಲಾಗಿದೆ.
ಫಹೀಮ್ ಅಲಿಯಾಸ್ ಎಟಿಎಂ ಬಂಧಿತ ಆರೋಪಿ. ಕಳ್ಳತನ, ದರೋಡೆ ಗ್ಯಾಂಗ್ನ ಮಾಸ್ಟರ್ ಮೈಂಡ್ ಆಗಿದ್ದ ಫಹೀಮ್ ಗ್ಯಾಂಗ್ನ ಇಬ್ಬರನ್ನು ಕಳೆದ ತಿಂಗಳು ಉತ್ತರ ಪ್ರದೇಶದಲ್ಲಿ ಬಂಧಿಸಲಾಗಿತ್ತು.
ಫಹೀಮ್ ಗ್ಯಾಂಗ್ ಬೆಂಗಳೂರಿನಲ್ಲಿ ಅಷ್ಟೇ ಅಲ್ಲ, ಉತ್ತರ ಪ್ರದೇಶದ ವಿವಿಧ ನಗರಗಳೂ ಸೇರಿದಂತೆ ದೇಶದಾದ್ಯಂತ ಕಳ್ಳತನ, ದರೋಡೆ ಕೃತ್ಯಗಳಲ್ಲಿ ಶಾಮೀಲಾಗಿತ್ತು. ಈತನಿಗಾಗಿ ಬೆಂಗಳೂರು ಪೊಲೀಸರು ಮಾತ್ರವಲ್ಲದೆ, ವಿವಿಧ ರಾಜ್ಯಗಳ ಪೊಲೀಸರು ಹುಡುಕಾಟ ನಡೆಸುತ್ತಿದ್ದರು.
ಫಹೀಮ್ ಗ್ಯಾಂಗ್ ಏಪ್ರಿಲ್ 24 ರಂದು ಮುಸುಕುಧಾರಿಗಳಾಗಿ ಬಂದು ಸಹಕಾರನಗರದಲ್ಲಿ ಮನೆಗಳ್ಳತನ ಮಾಡಿತ್ತು. ಪ್ರಕರಣದಲ್ಲಿ ಫಹೀಮ್ ಎ1 ಆರೋಪಿಯಾಗಿದ್ದಾನೆ. ಘಟನೆ ಸಂಬಂಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಬಳಿಕ ಈತನ ಬಂಧನಕ್ಕೆ ಕೊಡಿಗೆಹಳ್ಳಿ ಪೊಲೀಸರು ಬಲೆ ಬೀಸಿದ್ದ. ಘಟನೆ ಸಂಬಂಧ ಮೂವರನ್ನು ಈಗಾಗಲೇ ಬಂಧಿಸಿದ್ದರು. ಆದರೆ, ಫಹೀಮ್ ಮಾತ್ರ ಬೆಂಗಳೂರು ಪೊಲೀಸರಿಗೆ ಸಿಗದೆ ತಲೆ ಮರೆಸಿಕೊಂಡಿದ್ದ.
ಸದ್ಯ ಉತ್ತರ ಪ್ರದೇಶದ ಮುರ್ದಾಬಾದ್ ಪೊಲೀಸರು ಫಹೀಮ್ನನ್ನು ಬಂಧಿಸಿದ್ದಾರೆ. ಅಷ್ಟೇ ಅಲ್ಲದೆ, ಆತನ ಮನೆಯನ್ನೂ ನೆಲಸಮಗೊಳಿಸಿದ್ದಾರೆ.