ಬೆಂಗಳೂರು:- ಸಾಕಷ್ಟು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ರೌಡಿಯನ್ನ ಹನುಮಂತನಗರ ಪೊಲೀಸರು ಗೂಂಡಾ ಆ್ಯಕ್ಟ್ ಅಡಿ ಅರೆಸ್ಟ್ ಮಾಡಿದ್ದಾರೆ.
Advertisement
ಅಜಿತ್ @ ಕರಿಯಾ ರಾಜೇಶ್ ಬಂಧಿತ ರೌಡಿಶೀಟರ್. ಈತ ಕೊಲೆ ಯತ್ನ, ಹಲ್ಲೆ, ದರೋಡೆಗೆ ಸಂಚು, ಸುಲಿಗೆ, ಬೆದರಿಕೆ ಸೇರಿದಂತೆ ಹಲವು ಕೃತ್ಯಗಳಲ್ಲಿ ಭಾಗಿಯಾಗಿದ್ದ. ಅಲ್ಲದೆ 2016ರಿಂದಲೂ ನಿರಂತರವಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಹಾಗೂ ಪ್ರಕರಣ ಒಂದರಲ್ಲಿ ಜಾಮೀನು ಪಡೆದು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ.
ಹೀಗಾಗಿ ಈತನ ವಿರುದ್ಧ ನ್ಯಾಯಾಲಯ NBW ವಾರೆಂಟ್ ಜಾರಿ ಮಾಡಿತ್ತು. ಇದೀಗ ಕಮಿಷನರ್ ಸೂಚನೆ ಮೇರೆಗೆ ಹನುಮಂತನಗರ ಪೊಲೀಸರು ಕುಖ್ಯಾತ ರೌಡಿಶೀಟರ್ ಕರಿಯ ರಾಜೇಶ್ ನನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.