ಬೆಂಗಳೂರು:- ಇದೇ ತಿಂಗಳ ದಿನಾಂಕ 25,26 ರಂದು ಬಸವನಗುಡಿ ಕಡಲೇಕಾಯಿ ಪರಿಷೆ ನಡೆಯಲಿದೆ ಎಂದು ಮುಜರಾಯಿ ಇಲಾಖೆ ಘೋಷಣೆ ಮಾಡಿದೆ.
Advertisement
ಎರಡು ದಿನಗಳ ಕಾಲ ನಡೆಯಲಿರುವ ಕಡಲೆಕಾಯಿ ಪರಿಷೆಗೆ ವ್ಯಾಪಾರಿಗಳಿಂದ ಸುಂಕ ವಸೂಲಾತಿಗೆ ಬ್ರೇಕ್ ಹಾಕಲು ಇಲಾಖೆ ನಿರ್ಧರಿಸಿದೆ. ಸಚಿವ ರಾಮಲಿಂಗಾ ರೆಡ್ಡಿ ಇಂದು ಅಧಿಕಾರಿಗಳ ಜೊತೆ ಸಭೆ ಮಾಡಿ ಕಡಲೆಕಾಯಿ ಪರಿಷೆ ಸಂಬಂಧ ಮಾರ್ಗಸೂಚಿ ಬಿಡುಗಡೆ ಮಾಡಲಿದ್ದಾರೆ.
ಇನ್ನೂ ನ.15 ರಿಂದ ಮಲ್ಲೇಶ್ವರಂ ಕಡಲೆಕಾಯಿ ಪರಿಷೆ ಆರಂಭವಾಗಲಿದ್ದು ಸಂಜೆ 4.30ಕ್ಕೆ ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ ಉದ್ಘಾಟಿಸಲಿದ್ದಾರೆ.
ಮಲ್ಲೇಶ್ವರಂನ ಶ್ರೀ ಕಾಡು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ, ಕಾಡು ಮಲ್ಲೇಶ್ವರ ಗೆಳೆಯರ ಬಳಗ ಪರಿಷೆಯನ್ನು ಆಯೋಜಿಸಿದೆ.