ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ ಇವರ ಸಹಯೋಗದಲ್ಲಿ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಕಾನೂನು ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರವನ್ನು ದತ್ತು ಗ್ರಾಮವಾದ ಹೊಸಳ್ಳಿಯಲ್ಲಿ ಉದ್ಘಾಟಿಸಲಾಯಿತು.
ಉಪನ್ಯಾಸಕ ಎಸ್.ಐ. ಅಣ್ಣಿಗೇರಿ ಕಾರ್ಯಕ್ರಮ ಉದ್ಘಾಟಿಸಿ ವಿಶೇಷ ಶಿಬಿರದ ಕುರಿತು ಶಿಬಿರಾರ್ಥಿಗಳಿಗೆ ತಿಳಿಸಿದರು. ಅಧ್ಯಕ್ಷತೆಯನ್ನು ವಹಿಸಿದ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಪಲ್ಲವಿ ಎಸ್.ಬುಯ್ಯಾರ ಎನ್.ಎಸ್.ಎಸ್‌ನ ಉದ್ದೇಶ, ಕರ್ತವ್ಯಗಳು ಹಾಗೂ ಶಿಬಿರಾರ್ಥಿಗಳಿಗೆ ಶಿಸ್ತು, ಸಮಯ ಪ್ರಜ್ಞೆಗೆ ಬದ್ಧರಾಗಿರಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಮ್.ವ್ಹಿ. ಹಿರೇಮಠ, ವಿಶ್ವನಾಥ ಹಿರೇಮಠ, ಮಹಾಂತೇಶ ಮಡ್ಡಿ, ಉಪನ್ಯಾಸಕಿಯರಾದ ಎನ್.ಎನ್. ಮುಲ್ಲಾ, ಎ.ಆರ್. ಕೇರಿ, ನೀತಾ ಬಣಕಾರ ಉಪಸ್ಥಿತರಿದ್ದರು. ಎನ್.ಎಸ್.ಎಸ್ ವಿಭಾಗದ ಸಂಯೋಜಕರಾದ ಮಹಾಂತೇಶ ಕೊರಡಕೇರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.