ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಎನ್.ಎಸ್.ಎಸ್. ಘಟಕದ ವತಿಯಿಂದ ಗದಗ ನಗರದ ಐತಿಹಾಸಿಕ ಪ್ರಸಿದ್ಧ ಶ್ರೀ ಸೋಮೇಶ್ವರ ದೇವಸ್ಥಾನ (ಕರೇ ದೇವರ ಗುಡಿ) ಹಾಗೂ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ `ಸ್ವಚ್ಛಮೇವ ಜೀವಿತೇ’ ಎಂಬ ಘೋಷಣೆಯಡಿಯಲ್ಲಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು.
ದೇವಸ್ಥಾನದ ಅರ್ಚಕರಾದ ಪ್ರದೀಪ ವಿ. ಹೀರೇಮಠ ಶಾಸ್ತ್ರಿಗಳು ಎನ್.ಎಸ್.ಎಸ್. ಘಟಕದ ಸ್ವಯಂಸೇವಕರೊಂದಿಗೆ ಸಂವಾದ ನಡೆಸಿ, ದೇವಸ್ಥಾನದ ಇತಿಹಾಸವನ್ನು ತಿಳಿಸಿದರು.
ಚಟುವಟಿಕೆಯಲ್ಲಿ ಎನ್.ಎಸ್.ಎಸ್. ಘಟಕದ ಕಾರ್ಯಕ್ರಮಾಧಿಕಾರಿ ಪ್ರೊ. ವಾಗೀಶ ಗು. ರೇಶ್ಮಿ, ಕಾರ್ಯನಿರ್ವಾಹಕ ಅಪ್ಪಣ್ಣ ಹಡಪದ, ನೀಲಮ್ಮ ಸೀತಾರಳ್ಳಿ, ಕಾರ್ಯದರ್ಶಿ ಪ್ರಶಾಂತ ಕಲಬುರ್ಗಿ, ಮುತ್ತಪ್ಪ ನೈನಾಪೂರ, ರುದ್ರಗೌಡ ಹಿರೇಗೌಡ್ರ, ಐಶ್ವರ್ಯ ಶಲವಡಿ, ಸಹನಾ ನಾಲ್ವಾಡದ, ಎನ್.ಎಸ್.ಎಸ್. ತಂಡ 1, 4, ಮತ್ತು 10ರ ನಾಯಕರಾದ ಮಹಾದೇವಪ್ಪ ಬೋಳಣ್ಣವರ, ರೇಖಾ ಪೂಜಾರ, ಆಕಾಶ ಕಳಗಣ್ಣವರ, ಸಹನಾ ನಾಲ್ವಾಡದ, ಸೋಮಶೇಖರ ಕುರಿ, ಶಹನಾಜ ನದಾಫ್, ಎನ್.ಎಸ್.ಎಸ್. ಘಟಕದ ವರದಿಗಾರರಾದ ಸವಿತಾ ಕಾಮತ ಮತ್ತು ಸ್ವಯಂಸೇವಕರು ಉಪಸ್ಥಿತರಿದ್ದರು.



