ನುಲಿಯ ಚಂದಯ್ಯ ಶ್ರೇಷ್ಠ ವಚನಕಾರ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಮೀಪದ ರಾಮಗಿರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ದಾಸೋಹದ ಜ್ಞಾನಿ ನುಲಿಯ ಚಂದಯ್ಯನವರ ಜಯಂತಿಯನ್ನು ಆಚರಿಸಲಾಯಿತು.

Advertisement

ನುಲಿಯ ಚಂದಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಶಿಕ್ಷಣ ಪ್ರೇಮಿ ಬಸಣ್ಣ ಬೆಟಗೇರಿ, ಸಮಾಜ ಸೇವೆಯಲ್ಲಿ ಧರ್ಮವಿದೆ ಎಂದು ಹೇಳಿದ ಕಾಯಕಯೋಗಿ ನುಲಿಯ ಚಂದಯ್ಯ. ಕನ್ನಡ ಸಾಹಿತ್ಯದಲ್ಲಿ, ನುಲಿಯ ಚಂದಯ್ಯ ಅಪರೂಪದ ಅಭಿವ್ಯಕ್ತಿ. ಇವರ ವಚನಗಳು ಅತ್ಯಂತ ಸರಳ ಹಾಗೂ ನೇರವಾಗಿ ದೇಸೀ ಸೊಗಡಿನಿಂದ ಕೂಡಿವೆ. 12ನೇ ಶತಮಾನದ ವಚನಕಾರರಲ್ಲಿ ನುಲಿಯ ಚಂದಯ್ಯ ಶ್ರೇಷ್ಠರು ಎಂದು ಹೇಳಿದರು.

ಈ ವೇಳೆ ಗ್ರಾ.ಪಂ ಅಧ್ಯಕ್ಷೆ ಅಡಿವೆಕ್ಕ ಬೆಟಗೇರಿ, ಮಾಜಿ ಅಧ್ಯಕ್ಷ ಸೋಮಣ್ಣ ಬೆಟಗೇರಿ, ಎಸ್‌ಡಿಎಮ್‌ಸಿ ಅಧ್ಯಕ್ಷ ಪರಸಣ್ಣ ಲಕ್ಕಣ್ಣವರ, ಶಾಲೆಯ ಭೂದಾನಿ ಶಂಕರಗೌಡ ಪಾಟೀಲ, ಶಾಲಾ ಪ್ರಧಾನ ಗುರುಮಾತೆ ಕೆ.ಸಿ. ಹನ್ನಿರ, ಮುತ್ತಕ್ಕ ಬೆಟಗೇರಿ, ನಿವೃತ್ತ ಶಿಕ್ಷಕಿ ಎಸ್.ಎಸ್. ಮುಳಗುಂದ, ಮಹೇಂದ್ರ ಬೆಟಗೇರಿ, ಬಿ.ಎಂ. ಯರಗುಪ್ಪಿ, ಡಿ.ಎನ್. ದೊಡ್ಡಮನಿ, ರಾಜೇಶ್ವರಿ ಅಡರಕಟ್ಟಿ, ವಿ.ಕೆ. ಪೂಜಾರ, ಎಚ್.ಬಿ. ಪಟ್ಟಣದ, ಬಿ.ಟಿ. ಹೆಬ್ಬಾಳ, ಡಿ.ಎನ್. ಮಾಯಣ್ಣವರ, ಪಿ.ಕೆ. ಗಾಂಜಿ, ಪ್ರಮೀಳಾ ಸೋಮನಕಟ್ಟಿ, ಜ್ಯೋತಿ ಬೆನಕವಾಡಿ, ಪ್ರೇಮಾ ಮುಳಗುಂದ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here