ಬೆಂಗಳೂರು: ನಟ್ಟು ಬೋಲ್ಟ್ ಹೇಳಿಕೆಗೂ ಬಿಗ್ ಬಾಸ್ ಮನೆಗೆ ಬೀಗ ಹಾಕಿದ್ದಕ್ಕೂ ಸಂಬಂಧವಿಲ್ಲ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಟ್ಟು ಬೋಲ್ಟ್ ಹೇಳಿಕೆಗೂ ಬಿಗ್ ಬಾಸ್ ಮನೆಗೆ ಬೀಗ ಹಾಕಿದ್ದಕ್ಕೂ ಸಂಬಂಧವಿಲ್ಲ.
ಬಿಜೆಪಿ, ಜೆಡಿಎಸ್ ಅವರಿಗೆ ಬೇರೆ ಕೆಲಸ ಇಲ್ಲ. ಹಾಗಾಗಿ ಆರೋಪ ಮಾಡ್ತಾರೆ. ನರೇಂದ್ರಸ್ವಾಮಿ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ. ಮಾಲಿನ್ಯ ಮಂಡಳಿಗೆ ನಿಯಮಗಳು ಇವೆ. ಸಿಎಂ, ಸರ್ಕಾರ, ಸಚಿವರಿಗೆ ಯಾರ ಮೇಲೂ ದ್ವೇಷ ಇಲ್ಲ. ನಾವು ಯಾರ ಮೇಲೂ ದ್ವೇಷದ ರಾಜಕೀಯ ಮಾಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಾಲಿನ್ಯ ನಿಯಂತ್ರಣ ಬೋರ್ಡ್ ಅಧ್ಯಕ್ಷ ನರೇಂದ್ರಸ್ವಾಮಿ ಅವರು ಈಗಾಗಲೇ ಹೇಳಿದ್ದಾರೆ. ಕಾನೂನು ರೀತಿ ಕ್ರಮ ಆಗುತ್ತದೆ. ಮಾಲಿನ್ಯ ನಿಯಂತ್ರಣ ಮಂಡಳಿ ಓಪನ್ ಮಾಡಿಸೋದು ಬೇಡ ಅಂತ ಹೇಳಿದ್ದಕ್ಕೆ ನರೇಂದ್ರಸ್ವಾಮಿ ವಿವರಣೆ ಕೊಟ್ಟಿದ್ದಾರೆ. ಬಿಜೆಪಿ ಅವರು ದ್ವೇಷ ತುಂಬಿಸೋ ಕೆಲಸ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.