ಬಿಜೆಪಿ ಅವಧಿಯಲ್ಲಿ ಸರಿಯಾದ ರಸ್ತೆ ಮಾಡಿದ್ರೆ ಇಂದು ಈ ದುಸ್ಥಿತಿ ಬರ್ತಿರ್ಲಿಲ್ಲ; ಡಿಕೆಶಿ ಕೌಂಟರ್

0
Spread the love

ಬೆಂಗಳೂರು:- ಬಿಜೆಪಿ ಅವಧಿಯಲ್ಲಿ ಸರಿಯಾದ ರಸ್ತೆ ಮಾಡಿದ್ರೆ ಇಂದು ಈ ದುಸ್ಥಿತಿ ಬರ್ತಿರ್ಲಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಕೌಂಟರ್ ಕೊಟ್ಟಿದ್ದಾರೆ. ಸದಾಶಿವನಗರದ ನಿವಾಸದಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿರುವ ಪ್ರಧಾನಿ ಮೋದಿಯವರ ನಿವಾಸದ ರಸ್ತೆಯಲ್ಲೂ ಗುಂಡಿಗಳಿವೆ. ಇಡೀ ದೇಶದಲ್ಲಿ ಇದೇ ಸ್ಥಿತಿ ಇದೆ ಎಂದರು.

Advertisement

ಈ ಹಿಂದೆ ಬಿಜೆಪಿ ಆಡಳಿತದಲ್ಲಿ ಸರಿಯಾದ ರಸ್ತೆ ಮಾಡಿದರೆ ಇವತ್ತು ಈ ರೀತಿಯ ಪರಿಸ್ಥಿತಿ ಬರುತ್ತಿಲಿಲ್ಲ ಎಂದಿದ್ದಾರೆ. ನಮ್ಮ ಜಿಬಿಎ ಅಧಿಕಾರಿಗಳು ಪ್ರತಿನಿತ್ಯ 1,000 ಗುಂಡಿಗಳನ್ನ ಮುಚ್ಚುತ್ತಿದ್ದಾರೆ.

ಅವ್ರು ನಾವು ಅದಷ್ಟು ಬೇಗ ಗುಂಡಿಗಳಿಂದ ಮುಕ್ತ ಬೆಂಗಳೂರು ಮಾಡುತ್ತೇವೆ ಅಂತಿದ್ದಾರೆ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ. ನಾವು ಗುಂಡಿಗಳನ್ನ ಮುಚ್ಚಿಸೋ ಕೆಲಸ ಮಾಡ್ತಾನೆ ಇದ್ದೇವೆ. ಬರೀ ಬೆಂಗಳೂರಿನಲ್ಲಿ ಮಾತ್ರ ಗುಂಡಿಗಳು ಇರೋ ರೀತಿ ಬಿಂಬಿಸಲಾಗ್ತಿದೆ ಎಂದು ದೂರಿದ್ದಾರೆ.


Spread the love

LEAVE A REPLY

Please enter your comment!
Please enter your name here