ವಿಜಯಸಾಕ್ಷಿ ಸುದ್ದಿ, ಗದಗ : ನಗರದ ವಿದ್ಯಾದಾನ ಸಮಿತಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ವೀರ ವನಿತೆ ಒನಕೆ ಓಬವ್ವ ಜಯಂತಿ ಆಚರಿಸಲಾಯಿತು. ವೀರವನಿತೆ ಒನಕೆ ಓಬವ್ವರ ಭಾವಚಿತ್ರಕ್ಕೆ ಶಾಲೆಯ ಮುಖ್ಯೋಪಾಧ್ಯಾಯ ಎಮ್.ವ್ಹಿ. ಹವಾಲ್ದಾರ್ ಹಾಗೂ ಸಿಬ್ಬಂದಿ ವರ್ಗದವರು ಹೂಮಾಲೆ ಅರ್ಪಿಸಿ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಮ್.ವ್ಹಿ. ಹವಾಲ್ದಾರ್, ಗಂಡು ಮೆಟ್ಟಿನ ನಾಡು, ಐತಿಹಾಸಿಕ ಚಿತ್ರದುರ್ಗದ ಕೋಟೆಯನ್ನು ರಕ್ಷಿಸಿದ ಒನಕೆ ಓಬವ್ವರಿಗೆ ದುರ್ಗದ ಇತಿಹಾಸದಲ್ಲಿ ಮಹತ್ವದ ಸ್ಥಾನವಿದೆ. ಬಹುಮುಖ್ಯವಾಗಿ ರಾಜನಿಷ್ಠೆ, ನಾಡಪ್ರೇಮ, ಸಮಯಪ್ರಜ್ಞೆ, ಅಪರಮಿತ ಧೈರ್ಯ, ಸಾಹಸ ಹಾಗೂ ತ್ಯಾಗದ ಪ್ರತೀಕವಾಗಿ ಚರಿತ್ರೆಯಲ್ಲಿ ದಾಖಲಾದ ವೀರ ವನಿತೆಯ ಬಗ್ಗೆ ಹಾಗೂ ಅಲ್ಲಿನ ಇತಿಹಾಸವನ್ನು ಸವಿಸ್ತಾರವಾಗಿ ಮಂಡಿಸಿದರು.
ಸಹ ಶಿಕ್ಷಕಿ ಎಂ.ಎನ್. ಹುಬ್ಬಳ್ಳಿ ವೀರ ವನಿತೆಯ ಚರಿತ್ರೆಯನ್ನು ತಿಳಿಸಿ, ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಶಾಲೆಯ ಹಿರಿಯ ಶಿಕ್ಷಕರಾದ ಆರ್.ಡಿ. ಪಡೇಸೂರ, ಜೆ.ಎಸ್. ಪುರಮಶೆಟ್ಟಿ, ಕಾವೇರಿ ಲಮಾಣಿ, ಶಿಲ್ಪಾ ಕರಿಬಿಷ್ಟಿ, ಎಚ್.ಸಿ. ಪಾಟೀಲ್ ಹಾಗೂ ಮಹೇಶ್ ಬ್ಯಾಳಿ ಉಪಸ್ಥಿತರಿದ್ದರು. ಸಮಸ್ತ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.