ವಿಜಯಸಾಕ್ಷಿ ಸುದ್ದಿ, ಗದಗ : ವಾಹನ ಸವಾರರು ಸಂಚಾರ ನಿಯಮವನ್ನು ಕಡ್ಡಾಯವಾಗಿ ಪಾಲಿಸಿದಲ್ಲಿ ಜೀವ ಹಾನಿಯನ್ನು ತಡೆಯಬಹುದು ಎಂದು ಗದಗ ಉಪ ವಿಭಾಗದ ಡಿವಾಯ್‌ಎಸ್‌ಪಿ ಜೆ.ಎಚ್. ಇನಾಮದಾರ ಹೇಳಿದರು.
ಅವರು ಗದಗ-ಬೆಟಗೇರಿ ಅವಳಿ ನಗದಲ್ಲಿ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ ಇವರುಗಳ ನೇತೃತ್ವದಲ್ಲಿ ಹಾಗೂ ಗದಗ ಉಪ ವಿಭಾಗ ಸಹಯೋಗದಲ್ಲಿ ಭಾರತೀಯ ಮೋಟಾರು ವಾಹನ ಕಾಯ್ದೆಗಳನ್ನು ಉಲ್ಲಂಘನೆ ಮಾಡಿ ಸಂಚರಿಸುವ ವಾಹನ ತಪಾಸಣೆ ನಡೆಸಿ, 64 ದ್ವಿಚಕ್ರ ವಶಪಡಿಸಿಕೊಂಡು ಮಾತನಾಡಿದರು.
ದ್ವಿಚಕ್ರ ವಾಹನ ಚಲಾವಣೆ ಮಾಡುವವರು ಕಡ್ಡಾಯವಾಗಿ ಪರವಾನಿಗೆ ಪತ್ರ ಪಡೆಯಬೇಕು. ನಂಬರ್ ಪ್ಲೇಟ್ ನವೀಕರಿಸಿಕೊಳ್ಳಬೇಕು. ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಕೊಂಡು ವಾಹನ ಚಲಾಯಿಸಬೇಕು.
ಇಲ್ಲದಿದ್ದರೆ ಭಾರತೀಯ ಮೋಟಾರು ವಾಹನ ಕಾಯ್ದೆಯಡಿ ದಂಡವನ್ನು ಕಟ್ಟಬೇಕಾಗುತ್ತದೆ ಮತ್ತು ಸಂಚಾರಿ ನಿಯಮ ಪಾಲನೆ ಮಾಡುವುದರಿಂದ ಜೀವ ಹಾನಿಯಿಂದ ತಪ್ಪಿಸಿಕೊಳ್ಳಲು ಸಹಾಯಕವಾಗುತ್ತದೆ ಎಂದರು.
ಸಿಪಿಐ ಧೀರಜ ಶಿಂದೆ, ಪಿಎಸ್‌ಐ ವಿಜಯ ತಳವಾರ, ನೂರಜಾನ ಸಾಬರ, ಶಕುಂತಲಾ ನಾಯಕ್, ಯು.ಸಿ. ಪಾಟೀಲ್ ಇದ್ದರು.