ವಿಜಯಸಾಕ್ಷಿ ಸುದ್ದಿ, ಗದಗ : ಎಸ್.ಡಿ.ಪಿ.ಐ. ಗದಗ ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ದಿನಾಂಕ ಶುಕ್ರವಾರ ಗದಗ ನಗರದ ಗಾಂಧಿ ವೃತ್ತದಲ್ಲಿ ಕಾರ್ಯಕರ್ತರು, ಸಮಾಜದ ಹಿರಿಯರು, ಯುವಕರು, ಧಾರ್ಮಿಕ ಮುಖಂಡರು ಸೇರಿ ವಕ್ಫ ತಿದ್ದುಪಡಿ ಮಸೂದೆ ವಿರುದ್ಧ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಬಿಲಾಲ ಗೋಕಾವಿ, ವಕ್ಫ ಬಿಲ್-2024 ಮಸೂದೆ ಅಸಂವಿಧಾನಿಕ ಹಾಗೂ ಅಲ್ಪಸಂಖ್ಯಾತ ವಿರೋಧಿ ಬಿಲ್ ಆಗಿದೆ. ಇದನ್ನು ನಾವು ಎಂದಿಗೂ ಒಪ್ಪಿವುದಿಲ್ಲ ಎಂದರು. ಧರ್ಮಗುರುಗಳಾದ ಮೌಲಾನ್ ಶಮಶುದ್ದೀನ ಅಣ್ಣಿಗೇರಿ ಮಾತನಾಡಿ, ವಕ್ಫ ಆಸ್ತಿ ಅಲ್ಲಾಹನ ಆಸ್ತಿ.
ಇದರಲ್ಲಿ ಸರ್ಕಾರ ಮಧ್ಯಸ್ಥಿಕೆ ವಹಿಸುವುದು ಸರಿಯಲ್ಲ. ಈ ಕರಾಳ ಕಾನೂನಿನ ವಿರುದ್ಧ ನಮ್ಮ ಸಮಾಜದ ಎಲ್ಲ ಯುವಕರು, ಧಾರ್ಮಿಕ ಮುಖಂಡರು, ಸಮದಾಯದ ನಾಯಕರು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಕರೆ ಕೊಟ್ಟರು.
ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಅನ್ವರ ಬಾಗೇವಾಡಿ ಮಾತನಾಡಿ, ವಕ್ಫ ಆಸ್ತಿಗಳ ಸಂರಕ್ಷಣೆ ಹಾಗೂ ವಕ್ಫ ಸುಧಾರಣೆಗಳ ಹೆಸರಿನಲ್ಲಿ ಇತ್ತೀಚಿಗೆ ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ವಕ್ಫ ಬಿಲ್-2024 ತಂದಿರುವುದು ಅತ್ಯಂತ ಆತಂಕಕಾರಿ ವಿಷಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಹಿದಾಯತುಲ್ಲಾ ಕಾಗದಗಾರ, ಮುಸ್ತಾಕ ಕಟ್ಟಿಮನಿ, ಅನ್ವರ ಮುಲ್ಲಾ, ಹಸನ್ ನಾಗನೂರ, ಸಮೀರ ಕೊಟ್ಟೂರು, ಮುಸ್ತಾಕ ಹೊಸಮನಿ, ಅಫ್ಪಾನ್ ತರಬ್ದಾರ, ಇಬ್ರಾಹಿಂ ಕುಂದರಪಿ, ಜಾಫರ ಅಹ್ಮದ, ನೌಶಾದ ಮುಲ್ಲಾ, ಇಸ್ಮಾಯಲ್ ಅಣ್ಣಿಗೇರಿ, ಸಾದಿಕ್, ಇರ್ಫಾನ್ ಗುಳಗುಂದಿ ಸೇರಿದಂತೆ ಅನೇಕ ಕಾರ್ಯಕರ್ತರು, ಗುರುಹಿರಿಯರು, ಯುವಕರು ಪಾಲ್ಗೊಂಡಿದ್ದರು.