ನೇಮಕಾತಿ ನಿಯಮಗಳಿಗೆ ಶಿಕ್ಷಕರಿಂದ ಆಕ್ಷೇಪಣೆ

0
Objection by teachers to recruitment rules
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಸಾರ್ವಜನಿಕ ಶಿಕ್ಷಣ ಇಲಾಖೆಯ ನೇಮಕಾತಿ ತಿದ್ದುಪಡಿ ಕರಡು ನಿಯಮಗಳಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಲಕ್ಷ್ಮೇಶ್ವರ ಶಾಖೆ, ಕ.ರಾ.ಪ್ರಾ. ಶಾಲಾ ಶಿಕ್ಷಕರ ಸಂಘ ಲಕ್ಷ್ಮೇಶ್ವರ, ಕ.ರಾ.ಸ. ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘ ಲಕ್ಷ್ಮೇಶ್ವರ ಘಟಕ ಹಾಗೂ ತಾಲೂಕಿನ ಎಲ್ಲಾ ಶೈಕ್ಷಣಿಕ ಸಂಘಗಳ ವತಿಯಿಂದ ಬುಧವಾರ ಆಕ್ಷೇಪಣೆ ಸಲ್ಲಿಸಿದರು.

Advertisement

ತಾಲೂಕಿನ ಕಾರ್ಯನಿರತ 1ರಿಂದ 7/8ನೇ ತರಗತಿಗಳಿಗೆ ಬೋಧಿಸುವ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಂದ, ಬಡ್ತಿ ವಂಚಿತ ಮುಖ್ಯೋಪಾಧ್ಯಾಯರಿಂದ ಹಾಗೂ ವರ್ಗಾವಣೆ ವಂಚಿತ ಶಿಕ್ಷಕರಿಂದ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಾಲೂಕಿನ 323 ಶಿಕ್ಷಕರ ಆಕ್ಷೇಪಣೆಗಳ ಮನವಿಗಳನ್ನು ಅಂಚೆಯ ಮೂಲಕ ರವಾನಿಸಿದರು.

ಈ ಸಂದರ್ಭದಲ್ಲಿ ಸಂಘದ ತಾಲೂಕಾಧ್ಯಕ್ಷ ಡಿ.ಎಚ್. ಪಾಟೀಲ ಹಾಗೂ ಕಾರ್ಯದರ್ಶಿ ಎಮ್.ಎ. ನದಾಫ್ ಮಾತನಾಡಿದರು. ಸಂಘದ ಅಧ್ಯಕ್ಷ ಎಮ್.ಡಿ. ವಾರದ ಹಾಗೂ ಪ್ರಧಾನ ಕಾರ್ಯದರ್ಶಿ ಬಿ.ಎಮ್. ಯರಗುಪ್ಪಿ ಮಾತನಾಡಿ, 1-5ರ ಶಿಕ್ಷಕರು ಎಂದು ಪದನಾಮ ಮಾಡಿ ಹಿಂಬಡ್ತಿ ನೀಡಿ ಪ್ರಸ್ತುತ 41300-81800ರ ವೇತನ ಶ್ರೇಣಿಗೆ ಸೀಮಿತಗೊಳಿಸಲಾಗಿದೆ. ಸದರಿ ಶಿಕ್ಷಕರಿಗೆ ಮುಂದಿನ ಬಡ್ತಿ ಜಿಪಿಟಿಗೆ ಎಂದು ಹೇಳಲಾಗುತ್ತಿದೆ. ಈ ಕ್ರಮದಿಂದ ಸೇವಾನಿರತರಿಗೆ ಬಹು ದೊಡ್ಡ ಅನ್ಯಾಯವಾಗುವುದರ ಜೊತೆಗೆ ಬಡ್ತಿ ನಿಯಮಗಳ ಸ್ಪಷ್ಟ ಉಲ್ಲಂಘನೆಯೂ ಆಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಿ.ಎಸ್. ನೇಕಾರ, ಬಿ.ಬಿ. ಯತ್ತಿನಹಳ್ಳಿ, ಎಸ್.ಎಮ್. ಬೋಮಲೆ, ಎಮ್.ಎಸ್. ಚಾಕಲಬ್ಬಿ, ಪಿ.ಪಿ. ಹಿರೇಮಠ, ಎಮ್.ಎಸ್. ಹಿರೇಮಠ, ಎಫ್.ಪಿ. ಡಂಬಳ ಹಾಗೂ ವಿವಿಧ ಶೈಕ್ಷಣಿಕ ಸಂಘಗಳ ಪದಾಧಿಕಾರಿಗಳು ಹಾಜರಿದ್ದರು.


Spread the love

LEAVE A REPLY

Please enter your comment!
Please enter your name here