ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ಚಾಮಿ ಕೇಸ್ನಲ್ಲಿ ಜಾಮೀನು ಪಡೆದು ಜಸ್ಟ್ ರಿಲೀಫ್ ಆಗಿರೋ ಹೊತ್ತಲ್ಲೇ ಆರೋಪಿಗಳಿಗೆ ಶಾಕ್ ಕೊಟ್ಟಿದೆ. ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಕೆ ಆಗಲಿದ್ದು, ಕೊಲೆ ಆರೋಪಿ ನಟ ದರ್ಶನ್ ಎದೆಬಡಿತ ಮತ್ತಷ್ಟು ಹೆಚ್ಚಿಸಿದೆ. ಇದರ ಬೆನ್ನಲ್ಲೇ ಪವಿತ್ರಾ ಗೌಡ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತವಾಗುತ್ತಿರುವ ಕಾಮೆಂಟ್‌ಗಳಿಗೆ ಪವಿತ್ರಾ ಗೌಡ ಮಗಳು ಖುಷಿ ಗೌಡ ಬೇಸರ ವ್ಯಕ್ತಪಡಿಸಿದ್ದಾರೆ. ಮಧ್ಯರಾತ್ರಿ ಅಮ್ಮನ ನೆನೆದು ಖುಷಿ ಗೌಡ ಸುದೀರ್ಘ ಪೋಸ್ಟ್‌ವೊಂದನ್ನು ಹಾಕಿದ್ದಾರೆ.
ಪವಿತ್ರಾ ಗೌಡ ಬಗ್ಗೆ ಕೆಟ್ಟ ಕಾಮೆಂಟ್ಸ್‌ಗಳಿಗೆ ನಾನು ಕೇರ್ ಮಾಡೋದಿಲ್ಲ. ನಾನು ಈ ರೀತಿ ಬರೆಯಬೇಕು ಅಂತ ಎಂದಿಗೂ ಯೋಚಿಸಲಿಲ್ಲ. ಆದರೆ, ನಿಮ್ಮ ಕಟು ಮಾತುಗಳು ಗಾಯ ಮಾಡಿದೆ. ನನ್ನ ತಾಯಿಯ ಬಗ್ಗೆ ಅಶ್ಲೀಲ ಕಾಮೆಂಟ್ಸ್, ಎಷ್ಟು ಅಂತ ದ್ವೇಷ ನನ್ನ ಹೃದಯವನ್ನು ಚುಚ್ಚಿದೆ ಎಂದು ನೋವಿನಿಂದ ನುಡಿದಿದ್ದಾರೆ.
ನಿಮಗ್ಯಾರಿಗೂ ಪವಿತ್ರಾ ಗೌಡ ಪರಿಚಯವಿಲ್ಲ. ಅಮ್ಮನ ಹೋರಾಟ, ತ್ಯಾಗಗಳು ನಿಮಗೆ ತಿಳಿದಿಲ್ಲ. ನನ್ನ ಅಮ್ಮ ಮೌನವಾಗಿ ಎದುರಿಸಿದ ಸವಾಲುಗಳು ನನಗೆ ಮಾತ್ರ ಗೊತ್ತು. ನನ್ನ ತಾಯಿ ನನ್ನ ಜಗತ್ತು, ನನ್ನ ಶಕ್ತಿ, ನನ್ನ ಸ್ಫೂರ್ತಿ ತಂದೆ ಜಾಗವನ್ನು ನನ್ನ ತಾಯಿ ತುಂಬಿಸಿದ್ದಾಳೆ ಎಂದು ತಾಯಿ ಪವಿತ್ರಾ ಗೌಡ ಕುರಿತು ಹೆಮ್ಮೆ ಪಟ್ಟಿದ್ದಾರೆ.
ನಾನು ಇನ್ನು ಚಿಕ್ಕವಳು, ಇನ್ನೂ ಪ್ರಪಂಚವನ್ನು ಅರ್ಥ ಮಾಡಿಕೊಳ್ಳೋದಕ್ಕೆ ಪ್ರಯತ್ನಿಸುತ್ತಿದ್ದೇನೆ. ಈ ಭಾರವನ್ನು ಹೊರಲು ಅಗಾಧವಾಗಿದೆ. ನನ್ನ ತಾಯಿಗೆ ಯಾರನ್ನೂ ನೋಯಿಸುವ ಉದ್ದೇಶವಿಲ್ಲ. ಯಾರು ಏನೇ ಹೇಳಿದ್ರು ಅಮ್ಮನೇ ನನ್ನ ಹೀರೋ. ಹೀಗೆಂದು ಪವಿತ್ರಾ ಗೌಡ ಕುರಿತು ಸುದೀರ್ಘ ಪತ್ರ ಬರೆದು ಪುತ್ರಿ ಖುಷಿ ಗೌಡ ಪವಿತ್ರಾಗೆ ಟ್ಯಾಗ್ ಮಾಡಿದ್ದಾರೆ.