ಬೆಂಗಳೂರು : ಪತಿಯ ಅಶ್ಲೀಲ ವಿಡಿಯೋ ವೈರಲ್ ಮಾಡುವುದಾಗಿ ಅಸ್ಸಾಂ ಮೂಲದ ಜಿಮ್ ಟ್ರೈನರ್ ಬ್ಲಾಕ್ ಮೇಲ್. ನಕಲಿ ಪೊಲೀಸಪ್ಪ ಮೂಲಕ ಹಣಕ್ಕೂ ಡಿಮ್ಯಾಂಡ್. ಒಪ್ಪದಿದ್ದಾಗ ಅಸ್ಸಾಂ ಮೂಲದ ದಂಪತಿ ಮೇಲೆ ಹಲ್ಲೆ ಅತ್ಯಾಚಾರ ಯತ್ನ. ದೂರು ದಾಖಲಾಗುತ್ತಿದ್ದಂತೆ ನಕಲಿ ಪೊಲೀಸಪ್ಪನಿಂದ ಕನ್ನಡ ವಿರೋಧಿಗಳೆಂದು ಅಸ್ಸಾಂ ದಂಪತಿಗೆ ಆವಾಜ್. ಅಷ್ಟಕ್ಕೂ ಅಶ್ಲೀಲ ವಿಡಿಯೋ ವೈರಲ್ ನೆಪದಲ್ಲಿ ಬ್ಲಾಕ್ ಮೇಲ್ ಮತ್ತು ಹಲ್ಲೆ ಅತ್ಯಾಚಾರ ಯತ್ನ ನಡೆಸಿದವರು ಯಾರೂ ಅಂತೀರಾ…..? ಈ ಸ್ಟೋರಿ ನೋಡಿ.
ಹೌದು ಹೀಗೆ ಒಂದು ಕಡೆ ಜನರಿಂದ ಗೂಸಾ ತಿಂದು ಪರಾರಿಯಾಗುತ್ತಿರುವ ಸದ್ದಾಂ. ಮತ್ತೊಂದು ಕಡೆ ಗೆಳತಿ ಜೊತೆಗಿನ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿ ತನ್ನ ಪತ್ನಿ ಮೇಲೆ ಹಲ್ಲೆ ನಡೆಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆಂದು ಪೊಲೀಸ್ ಠಾಣೆ ಮೆಟ್ಟಿಲೇರಿರುವ ಅಬ್ದುಲ್.
ಈ ಎಲ್ಲಾ ದೃಶ್ಯ ಕಂಡು ಬಂದದ್ದು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಸೂರ್ಯನಗರ ಪೊಲೀಸ್ ವ್ಯಾಪ್ತಿಯಲ್ಲಿ. ಇಬ್ಬರು ಅಸ್ಸಾಂ ಮೂಲದವರಾಗಿದ್ದು, ಸದ್ದಾಂ ಬೆಂಗಳೂರಿನ ಹೊಂಗಸಂದ್ರದಲ್ಲಿ ಜಿಮ್ ಟ್ರೈನರ್ ಆಗಿದ್ದು, ಅಬ್ದುಲ್ ತನ್ನ ಪತ್ನಿ ಮೂವರು ಮಕ್ಕಳ ಜೊತೆ ಚಂದಾಪುರ ಬಳಿಯ ಕಿತ್ತಗಾನಹಳ್ಳಿ ಬಳಿಯ ಫಾರ್ಮ್ ಹೌಸ್ನಲ್ಲಿ ಕಾರ್ಮಿಕರಾಗಿದ್ದಾರೆ.
ಆದ್ರೆ ಇಂದು ಅಶ್ಲೀಲ ವಿಡಿಯೋ ವೈರಲ್ ಬ್ಲಾಕ್ ಮೇಲ್ ವಿಚಾರದಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಯುವತಿಯೊರ್ವಳನ ಜೊತೆಗಿನ ವಿಡಿಯೋ ವೈರಲ್ ಮಾಡುವುದಾಗಿ ಜಿಮ್ ಟ್ರೈನರ್ ಸದ್ದಾಂ ಮತ್ತು ನಕಲಿ ಪೊಲೀಸಪ್ಪ ಸಾಯಿ ಜೀವನ್ ಅಬ್ದುಲ್ ದಂಪತಿಗೆ ನಿನ್ನೆ ಬೆದರಿಕೆ ಹಾಕಿದ್ದು, ಒಂದು ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾನೆ. ಒಪ್ಪದಿದ್ದಾಗ ಹಲ್ಲೆ ನಡೆಸಿ ಅಬ್ದುಲ್ ಪತ್ನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಅಬ್ದುಲ್ ಪತ್ನಿ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇನ್ನೂ ಜಿಮ್ ಟ್ರೈನರ್ ಸದ್ದಾಂ ಮತ್ತು ಅಬ್ದುಲ್ ಒಬ್ಬಳೇ ಯುವತಿಯನ್ನು ಲವ್ ಮಾಡುತ್ತಿದ್ದರು. ಅವ್ಳು ಅಸ್ಸಾಂನಲ್ಲಿ ಇದ್ದುಕೊಂಡೆ ಇಬ್ಬರಿಗೂ ಚಳ್ಳೆಹಣ್ಣು ತಿನ್ನಿಸುತ್ತಿದ್ದಳು. ಈ ನಡುವೆ ಅದೇಗೋ ಅಬ್ದುಲ್ ಮತ್ತು ಯುವತಿ ಅಶ್ಲೀಲ ವಿಡಿಯೋ ಸದ್ದಾಂಗೆ ಸಿಕ್ಕಿದ್ದು, ಅಬ್ದುಲ್ ಗೆ ಹಣಕ್ಕಾಗಿ ವಿಡಿಯೋ ವೈರಲ್ ಮಾಡುವ ಬೆದರಿಕೆ ಹಾಕಿದ್ದಾನೆ.
ಬಗ್ಗದಿದ್ದಾಗ ಬೇಗೂರಿನ ಸಾಯಿ ಜೀವನ್ ಎಂಬ ನಕಲಿ ಪೊಲೀಸಪ್ಪನ ಮೂಲಕ ಅವಾಜ್ ಹಾಕಿಸಿದ್ದಾನೆ. ಆದ್ರೆ ನಕಲಿ ಪೊಲೀಸಪ್ಪನಿಗೆ ಅವಾಜ್ ಹಾಕಿದ ಅಬ್ದುಲ್ ನಂಬರ್ ಬ್ಲಾಕ್ ಮಾಡಿದ್ದಾನೆ. ಕೆರಳಿದ ಸಾಯಿ ಜೀವನ್ ಮತ್ತು ಸದ್ದಾಂ ನಿನ್ನೆ ಅಬ್ದುಲ್ ಕುಟುಂಬ ವಾಸವಿದ್ದ ಕಿತ್ತಗಾನಹಳ್ಳಿ ಬಳಿಯ ಫಾರ್ಮ್ ಹೌಸ್ ಗೆ ನುಗ್ಗಿ ಒಂದು ಲಕ್ಷ ಹಣ ನೀಡುವಂತೆ ಒತ್ತಾಯಿಸಿದ್ದಾರೆ.
ಒಪ್ಪದಿದ್ದಾಗ ಅಬ್ದುಲ್ ಪತ್ನಿಯನ್ನು ಮಂಚಕ್ಕೆ ಕರೆದಿದ್ದು, ಅತ್ಯಾಚಾರಕ್ಕು ಯತ್ನಿಸಿದ್ದಾರೆ. ಕೊನೆಗೆ ಕಿರುಚಾಡುತ್ತಿದ್ದಂತೆ ಅಕ್ಕಪಕ್ಕದವರು ಗೂಸಾ ನೀಡಿದ್ದು, ಅಲ್ಲಿಂದ ಪರಾರಿಯಾಗಿದ್ದಾರೆ.
ಅಶ್ಲೀಲ ವಿಡಿಯೋ ವೈರಲ್ ಬ್ಲಾಕ್ ಮೇಲ್ ಹಲ್ಲೆ ಮತ್ತು ಅತ್ಯಾಚಾರ ಯತ್ನ ಕೇಸ್ ಸೂರ್ಯನಗರ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಂತೆ ವರಸೆ ಬದಲಿಸಿದ ನಕಲಿ ಪೊಲೀಸಪ್ಪ ಮತ್ತು ಜಿಮ್ ಟ್ರೈನರ್ ಅಸ್ಸಾಂ ದಂಪತಿ ಕನ್ನಡ ವಿರೋಧಿಗಳು ಎಂಬಂತೆ ಬಿಂಬಿಸಲು ಹೊರಟಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.