ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಸೋಮವಾರ ಶ್ರದ್ಧಾಭಕ್ತಿಯಿಂದ ಮುಸ್ಲಿಂ ಬಾಂಧವರು ಪವಿತ್ರ ಹಬ್ಬ ಈದ್ ಉಲ್ ಫಿತ್ರ್ (ರಂಜಾನ್ ಹಬ್ಬ)ವನ್ನು ಆಚರಣೆ ಮಾಡಿದರು.
ನರೇಗಲ್ಲ, ಅಬ್ಬಿಗೇರಿ, ಯರೇಬೇಲೇರಿ, ಕುರುಡಗಿ, ಡ.ಸ. ಹಡಗಲಿ, ನಿಡಗುಂದಿ, ಜಕ್ಕಲಿ, ಮಾರನಬಸರಿ, ಗುಜಮಾಗಡಿ, ಹೊಸಳ್ಳಿ, ಹಾಲಕೇರಿ, ಕೋಚಲಾಪೂರ, ಮೊದಲಾದ ಕಡೆಗಳಲ್ಲಿ ಹಬ್ಬದ ಖುಷಿ ಮನೆ ಮಾಡಿತ್ತು. ಮುಸ್ಲಿಂ ಬಾಂಧವರು ಹಿಂದೂ ಬಾಂಧವರನ್ನು ತಮ್ಮ ಮನೆಗೆ ಕರೆದು ರಂಜಾನ್ ಹಬ್ಬದ ವಿಶೇಷ ಶೀರ್‌ಕೂರ್ಮಾ (ಸುರ್‌ಕುಂಬಾ) ಕೊಟ್ಟು, ಊಟ ಮಾಡಿಸಿ, ಭ್ರಾತೃತ್ವ ಮೆರೆದರು.
ನರೇಗಲ್ಲ ಪಟ್ಟಣದ ಗದಗ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಮುಸ್ಲಿಂ ಬಾಂಧವರು ಎಲ್ಲರೂ ಸೇರಿಕೊಂಡು ಏಕಕಾಲಕ್ಕೆ ಸಾಮೂಹಿಕ ಪ್ರಾರ್ಥನೆ ಮಾಡಿದರು.
ಮಸೀದಿ, ಈದ್ಗಾಗಳಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಮುಸ್ಲಿಂ ಬಾಂಧವರು ತಮ್ಮ ಶಕ್ತಿಗನುಸಾರವಾಗಿ ದಾನ-ಧರ್ಮ ಮಾಡಿದರು. ಹಿರಿಯರು ಮಕ್ಕಳ ಕೈಗೂ ಹಣ ಕೊಟ್ಟು, ಚಿಕ್ಕಮಕ್ಕಳು ಸಹ ದಾನ ಮಾಡುವಂತೆ ಪ್ರೇರೇಪಿಸಿದ್ದು ವಿಶೇಷವಾಗಿತ್ತು.
ಸಾಮೂಹಿಕ ಪ್ರಾರ್ಥನೆಯಲ್ಲಿ ಎ.ಆಯ್. ರಾಹುತ್, ಎ.ಎ. ನವಲಗುಂದ, ಫಾರೂಕ್ ಹಳ್ಳಿಕೇರಿ, ಗುಲಾಬ ಮಕಾನದಾರ, ಶಫಿ ಸವಡಿ, ಹಸನಸಾಬ ಕಲೆಗಾರ, ಖಾದೀರ ನಶೇಖಾನ, ಅಲ್ಲಾಭಕ್ಷಿ ನದಾಫ್, ಭಾಷಾ ಹೂಲಗೇರಿ, ಮಾಬುಸಾಬ ಮುದಗಲ್, ಮೈನುದ್ದೀನಸಾಬ ಮುಗಳಿ, ನೂರಹ್ಮದ ರೋಣದ, ನಜೀರ ಹದ್ಲಿ, ಮಲಿಕಸಾಬ ರೋಣದ, ಸಮೀರ ಬಳಬಟ್ಟಿ, ರಫೀಕ ನದಾಫ್, ಲಾಡಸಾಬ ಹದ್ಲಿ, ಸಿಕಂದರ ಕುದರಿ, ದಾವುದಲಿ ಕುದರಿ, ಹಟೇಲಸಾಬ ಲತೀಫಸಾಬನ್ನವರ, ಖಾದೀರಸಾಬ್ ಬನ್ನಿಗೋಳ, ಪೀರಸಾಬ ರಾಹುತ್, ಅಬ್ದುಲ್‌ಗನಿ ಕುದರಿ, ಗಫಾರ ಬಾಲೇಸಾಬನವರ, ಅಬ್ದುಲ್‌ಸಾಬ ರವಡೂರ, ಪೀರಸಾಬ ನದಾಫ್, ರೈಮಾನಸಾಬ ತಹಸೀಲ್ದಾರ, ಹಸನಸಾಬ ಕೊಪ್ಪಳ, ಮೊಹ್ಮದ್ ನಶೇಖಾನ, ಅಬ್ದುಲ್‌ರಹಿಮಾನ ನವಲಗುಂದ, ಕೊಪ್ಪದ, ಮಹಬೂಬ ಹೊಸಮನಿ, ರೈಮಾನಸಾಬ ಕುಂದಗೋಳ, ಇಮಾಮಹುಸೇನ ಹಜರತ್, ಕಾಶೀಂಸಾಬ ಹೊಸಮನಿ, ಹಸನ್ ಕಲೇಗಾರ, ಎಂ.ಅಯ್. ರಾಹುತ್, ಅಲ್ಲಾಭಕ್ಷಿ ನದಾಫ್ ಮುಂತಾದವರು ಪಾಲ್ಗೊಂಡಿದ್ದರು. ನರೇಗಲ್ಲ ಪೊಲೀಸ್ ಠಾಣಾ ಸಿಬ್ಬಂದಿಗಳು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.
ದರಗಾದ ಮಂಜೂರ ಹುಸೇನ ಶ್ಯಾವಲಿ ಶರಣರು ಆಶೀರ್ವಚನ ನೀಡಿ, ಪವಿತ್ರ ರಂಜಾನ್ ಒಂದು ತಿಂಗಳ ಉಪವಾಸ ಮಾಡುವ ಮೂಲಕ ದೇವರ ಜೊತೆ ನಮ್ಮ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತೆ. ಈ ತಿಂಗಳಲ್ಲಿ ಉಪವಾಸ ಮಾಡಿದರೆ ಸಂಕಷ್ಟಗಳು ಕಡಿಮೆಯಾಗುತ್ತವೆ. ಈ ತಿಂಗಳಲ್ಲಿ ಬಡವರಿಗೆ ದಾನ-ಧರ್ಮ ಮಾಡುವುದು ಹಾಗೂ ಹಸಿದವರಿಗೆ ಆಹಾರ ನೀಡುವಂತಹ ಪುಣ್ಯ ಕಾರ್ಯಗಳನ್ನು ಮಾಡಲಾಗುತ್ತದೆ ಎಂದರು.