IPLಗೆ ಗುಡ್​ಬೈ ಹೇಳಿದ ಆಫ್​ ಸ್ಪಿನ್ನರ್ ಆರ್​.ಅಶ್ವಿನ್!

0
Spread the love

ಇತ್ತೀಚೆಗಷ್ಟೇ ಭಾರತದ ಟೆಸ್ಟ್​ ಕ್ರಿಕೆಟ್​ಗೆ ಗುಡ್​ಬೈ ಹೇಳಿದ್ದ ಆಲ್​ರೌಂಡರ್ ರವಿಚಂದ್ರನ್ ಅಶ್ವಿನ್ ಅವರು ಈಗ ಐಪಿಎಲ್​ಗೂ ನಿವೃತ್ತಿ ಘೋಷಿಸಿದ್ದಾರೆ.

Advertisement

ಟಿ20 ಪಂದ್ಯಗಳಲ್ಲಿ ಅತ್ಯುತ್ತಮ ಸ್ಪಿನ್ನರ್ ಎಂದು ಖ್ಯಾತಿ ಪಡೆದಿರುವ ಆರ್ ಅಶ್ವಿನ್ ಅವರು, ಆಡಿದ ಐಪಿಎಲ್​ ಟೂರ್ನಿಗಳಲ್ಲಿ ಇದುವರೆಗೆ 187 ವಿಕೆಟ್​ಗಳನ್ನು ಉರುಳಿಸಿದ್ದಾರೆ. 833 ರನ್​ ಗಳಿಸಿದ್ದು ಇದರಲ್ಲಿ ಒಂದು ಅರ್ಧಶತಕ ಸೇರಿದೆ. ಐಪಿಎಲ್​ನಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದವರ ಪೈಕಿ ಆರ್ ಅಶ್ವಿನ್ ಅವರು ಐದನೇ ಸ್ಪಿನ್ನರ್ ಎನಿಸಿಕೊಂಡಿದ್ದಾರೆ.

ಈವರೆಗೆ ಆರ್ ಅಶ್ವಿನ್ ಅವರು 16 ಸೀಸನ್​ಗಳಲ್ಲಿ 5 ತಂಡಗಳ ಪರ ಆಡಿದ್ದರು. 2025ರ ಮೆಗಾ ಆಕ್ಷನ್​ನಲ್ಲಿ ಅಶ್ವಿನ್ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಭಾಗವಾಗಿದ್ದರು. ಆದರೆ ಕಳೆದ ಋತುವಿನಲ್ಲಿ ಪ್ರದರ್ಶನ ಕಳಪೆಯಾಗಿತ್ತು. ಸಿಎಸ್​ಕೆ ಪರವಾಗಿ ಒಟ್ಟು 7 ಸೀಸನ್​ಗಳನ್ನು ಆಡಿದ್ದ ಅಶ್ವಿನ್ ಉಳಿದವುಗಳನ್ನು ಬೇರೆ ತಂಡಗಳ ಪರವಾಗಿ ಬೌಲಿಂಗ್ ಮಾಡಿದ್ದರು ಎನ್ನಲಾಗಿದೆ.


Spread the love

LEAVE A REPLY

Please enter your comment!
Please enter your name here