HomeGadag Newsಅಧಿಕಾರಿಗಳನ್ನು ಗೌರವದಿಂದ ಕಾಣಬೇಕು

ಅಧಿಕಾರಿಗಳನ್ನು ಗೌರವದಿಂದ ಕಾಣಬೇಕು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಗ್ರಾಮಗಳು ಅಭಿವೃದ್ಧಿ ಹೊಂದಲು ಪಿಡಿಓಗಳ ಕೊಡುಗೆ ಅಪಾರ ಎಂದು ಯಲಿಶಿರೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಯಲಿ ಹೇಳಿದರು.

ಅವರು ಯಲಿಶಿರೂರ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಜೋಸ್ನಾ ಸಿ.ಎಚ್. ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಿ ಮಾತನಾಡಿ, ಗ್ರಾಮಗಳು ಅಭಿವೃದ್ಧಿ ಹೊಂದಲು ರಾಜ್ಯ ಹಾಗೂ ಕೇಂದ್ರ ಸರಕಾರ ಸಾಕಷ್ಟು ಯೋಜನೆಗಳನ್ನು ರೂಪಿಸುತ್ತವೆ. ಅವುಗಳನ್ನು ಜಾರಿಗೊಳಿಸಲು ಪಿಡಿಓಗಳ ಕೊಡುಗೆ ಅಪಾರವಾಗಿರುತ್ತದೆ. ಆ ನಿಟ್ಟಿನಲ್ಲಿ ನಮ್ಮ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಯಾಗಿ ಮೂರು ವರ್ಷಗಳ ಕಾಲ ಗ್ರಾಮೀಣ ಜನರ ಬುದುಕು ಹಸನಾಗಲು ಶ್ರಮಿಸಿದ ಪಿಡಿಓ ಜೋಸ್ನಾ ಸಿ.ಎಚ್ ಅವರ ಕಾರ್ಯ ಶ್ಲಾಘನೀಯ ಎಂದರು.

ಗ್ರಾ.ಪಂ ಸದಸ್ಯ ಚಂದ್ರಶೇಖರ ಕಪ್ಪತ್ತನವರ ಮಾತನಾಡಿ, ನಮ್ಮ ಗ್ರಾ.ಪಂ ಪಿಡಿಓ ಜೋಸ್ನಾ ಸಿ.ಎಚ್ ಉತ್ತಮ ಅಧಿಕಾರಿಯಾಗಿ ಮೂರು ವರ್ಷಗಳ ಕಾಲ ಉತ್ತಮ ಸೇವೆ ನೀಡಿ ಲಿಂಗದಾಳ ಗ್ರಾಮ ಪಂಚಾಯತಿಗೆ ವರ್ಗಾವಣೆ ಹೊಂದಿದ್ದು, ಇಂತಹ ಅಧಿಕಾರಿಗಳು ಇದ್ದಲ್ಲಿ ಗ್ರಾಮಗಳು ಅಭಿವೃದ್ಧಿ ಹೊಂದಲು ಸಹಕಾರಿಯಾಗುತ್ತದೆ. ಅಧಿಕಾರಿಗಳನ್ನು ಗೌರವದಿಂದ ಕಾಣಬೇಕು ಎಂದರು.

ಉಪಾಧ್ಯಕ್ಷೆ ಅಲ್ಲಾಬಿ ನದಾಫ್, ಸದಸ್ಯರಾದ ರಾಜೇಶ್ವರಿ ಕೋಟಗಿ, ಪರಶುರಾಮ ಹೂಗಾರ, ಕವಿತಾ ಹೊನ್ನಪ್ಪನವರ, ಶರಣಪ್ಪ ಡೋಣಿ, ಶಿವಪುತ್ರಪ್ಪ ಭರಮನಾಯ್ಕರ, ಶಿವಯ್ಯ ಮನಿಗೇನಿ, ಮುದುಕಪ್ಪ ಮುಳಗುಂದ, ಪಾರ್ವತವ್ವ ಕಲ್ಯಾಣಿ, ನಾಗಮ್ಮ ಕುರ್ತಕೋಟಿ, ಶೇಖಪ್ಪ ಕಟ್ಟಿಮನಿ, ಚನ್ನಬಸವ್ವ ದಂಡಿನ, ಪಾಂಡಪ್ಪ ರಾಮಗೇರಿ, ರೇಣವ್ವ ಪ್ಯಾಟಿ, ನೀಲಪ್ಪ ಮಾಲಿಂಗಪೂರ, ಮಂಜುನಾಥ ಭಜಂತ್ರಿ, ರೇಣವ್ವ ಡಂಬ್ರಳ್ಳಿ, ಯಲ್ಲವ್ವ ವಡ್ಡರ, ಪ್ರಕಾಶ ಬೋರಣ್ಣವರ ಸೇರಿದಂತೆ ಗ್ರಾಮ ಪಂಚಾಯಿತಿಯ ಸರ್ವ ಸಿಬ್ಬಂದಿಗಳು ಇದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!