ಅಧಿಕಾರಿಗಳ ಎಡವಟ್ಟು: KRS ಡ್ಯಾಂ ಮುಂಭಾಗದ ತಡೆಗೋಡೆ ಕುಸಿತ

0
Spread the love

ಮಂಡ್ಯ: ರಾಜ್ಯದಲ್ಲಿ ಕೆಲ ದಿನಗಳಿಂದ ಧಾರಕಾರ ಮಳೆ ಹಿನ್ನೆಲೆಯಲ್ಲಿ KRS ಡ್ಯಾಂ ಮುಂಭಾಗದ ತಡೆಗೋಡೆ ಕುಸಿತವಾಗಿದೆ. ಹೌದು KRS ಡ್ಯಾಂ ಮುಂಭಾಗದ ನಗುವನ ತೋಟದ ತಡೆಗೋಡೆ ಕುಸಿದಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್​ಎಸ್​ ಡ್ಯಾಂನಿಂದ ನೀರು ಬಿಡುಗಡೆ ವೇಳೆ ನಿರ್ಲಕ್ಷ್ಯ ತೋರಿದ್ದರಿಂದ ಗೋಡೆ ಕುಸಿದಿದೆ. ನೀರಿನ ರಭಸಕ್ಕೆ ನಗುವನ ತೋಟದ ತಡೆಗೋಡೆ ಕೊಚ್ಚಿಹೋಗಿದೆ.

Advertisement

ನೀರು ಬಿಟ್ರೆ ತೋಟಕ್ಕೆ ತೊಂದರೆ ಆಗಬಾರದೆಂದು ಈ ತಡೆಗೋಡೆ ಕಟ್ಟಲಾಗಿತ್ತು. ಇತ್ತೀಚೆಗಷ್ಟೇ ಲಕ್ಷಾಂತರ ರೂ. ವೆಚ್ಚದಲ್ಲಿ ಈ ತಡೆಗೋಡೆ ನಿರ್ಮಿಸಲಾಗಿತ್ತು. ಗೇಟ್​ನಿಂದ ಒಮ್ಮೆಯೇ ಹೆಚ್ಚಿನ ನೀರು ಬಿಟ್ಟಿದ್ದರಿಂದ ಗೋಡೆ ಕುಸಿದಿದೆ. ನಿಧಾನವಾಗಿ ನೀರಿನ ಪ್ರಮಾಣ ಹೆಚ್ಚಿಸಿದ್ರೆ ತೊಂದರೆ ಆಗುತ್ತಿರಲಿಲ್ಲ. ಹೀಗಾಗಿ ನಿಗಮದ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ತಡೆಗೋಡೆ ಕುಸಿದಿದೆ ಎಂದು ಜನರು ಆಕ್ರೋಶ ಹೊರ ಹಾಕಿದ್ದಾರೆ.


Spread the love

LEAVE A REPLY

Please enter your comment!
Please enter your name here