ಭಾರತದ ಗೋಲ್ಡನ್ ಬಾಯ್ ಜಾವೆಲಿನ್ ಸ್ಟಾರ್ ನೀರಜ್ ಚೋಪ್ರಾ ಸತತ ಎರಡನೇ ಬಾರಿ ಒಲಿಂಪಿಕ್ಸ್ ಚಿನ್ನದ ಪದಕ ಗೆಲ್ಲುವಲ್ಲಿ ವಿಫಲರಾಗಿದ್ದಾರೆ.
2024ರ ಪ್ಯಾರಿಸ್ ಒಲಿಂಪಿಕ್ಸ್ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.
ನೀರಜ್ ಅವರು ಮೊದಲ ಪ್ರಯತ್ನದಲ್ಲಿ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಕಾಲು ಗೆರೆ ತಾಗಿದ್ದರ ಪರಿಣಾಮ ಫೌಲ್ ಆಗಿ ವಿಫಲರಾಗಿದ್ದರು. ಆದರೆ 2ನೇ ಪ್ರಯತ್ನದಲ್ಲಿ 89.45 ಮೀಟರ್ ಗಳಿಗೆ ಭರ್ಜಿ ಎಸೆದಿದ್ದರು. 3ನೇ ಪ್ರಯತ್ನದಲ್ಲಿ ಮತ್ತೆ ಫೌಲ್ ಆಗಿದ್ದರು.ಪಾಕಿಸ್ತಾನದ ಅರ್ಶದ್ ನದೀಮ್ ಮೊದಲ ಪ್ರಯತ್ನದಲ್ಲೇ 92.97 ಮೀಟರ್ ಭರ್ಜಿ ಎಸೆದು ಒಲಿಂಪಿಕ್ಸ್ ದಾಖಲೆಯನ್ನು ಮುರಿದು ಚಿನ್ನದ ಪದಕ ತಮ್ಮದಾಗಿಸಿಕೊಂಡರು.
ಬಳಿಕ ಮಾತನಾಡಿದ ನೀರಜ್ ಜೋಪ್ರಾ, ಪ್ರತಿಯೊಬ್ಬ ಕ್ರೀಡಾಪಟುಗಳು ತಮ್ಮ ದಿನವನ್ನು ಹೊಂದಿರುತ್ತಾರೆ. ಇಂದು ಅರ್ಷದ್ ಅವರ ದಿನವಾಗಿತ್ತು. ನಮ್ಮ ರಾಷ್ಟ್ರಗೀತೆಯನ್ನು ಇಂದು ನುಡಿಸದೇ ಇರಬಹುದು, ಆದರೆ ಭವಿಷ್ಯದಲ್ಲಿ ಬೇರೆಡೆ ಖಂಡಿತವಾಗಿಯೂ ನುಡಿಸಲಾಗುವುದು ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಂದಹಾಗೇ, 32 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಅರ್ಶದ್ ನದೀಮ್ ಚಿನ್ನದ ಪದಕ ತಂದು ಕೊಟ್ಟಿದ್ದಾರೆ. ಹರ್ಷದ್ ನದೀಮ್ ಅವರು ದಾಖಲೆಯ 92.97 ಮೀಟರ್ ದೂರದಲ್ಲಿ ಜಾವೆಲಿನ್ ಎಸೆದು ಸಾರ್ವಕಾಲಿಕ ಒಲಿಂಪಿಕ್ ದಾಖಲೆ ನಿರ್ಮಿಸಿದ್ದಾರೆ.
ನದೀಮ್ ಅವರು ಆರು ಪ್ರಯತ್ನಗಳಲ್ಲಿ ಎರಡು ಬಾರಿ 90 ಮೀಟರ್‌ಗಳಷ್ಟು ಜಾವೆಲಿನ್ ಅನ್ನು ಎಸೆದರು. ಇದು ಅವರ ವೈಯಕ್ತಿಕ ದಾಖಲೆಯೂ ಆಗದ್ದು, ಈ ಗೆಲುವಿನೊಂದಿಗೆ ಪಾಕಿಸ್ತಾನದ 32 ವರ್ಷಗಳ ಸುದೀರ್ಘ ಕಾಯುವಿಕೆ ಕೊನೆಗೊಂಡಿದೆ.