ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಗದಗ ಮತಕ್ಷೇತ್ರದಲ್ಲಿ ಶೇ. 100ರಷ್ಟು ಗುರಿ ಸಾಧನೆ ಮಾಡುವ ಮೂಲಕ ರಾಜ್ಯದಲ್ಲಿಯೇ ಮಾದರಿ ಕಾರ್ಯ ಮಾಡಲು ಸಚಿವ ಎಚ್.ಕೆ. ಪಾಟೀಲ ಅವರು ಸೂಚಿಸಿದ್ದು, ಜನರು ಸಭೆಯ ಪ್ರಯೋಜನ ಪಡೆಯಬೇಕು ಎಂದು ಗದಗ ತಾಲೂಕಾ ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ಹೇಳಿದರು.
ಸಮೀಪದ ನಾಗಾವಿ ಗ್ರಾಮದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಾರ್ವಜನಿಕ ಅಹವಾಲು ಸ್ವೀಕಾರ, ಪರಿಹಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಡ ಜನರ ಬದುಕು ರೂಪಿಸುವಲ್ಲಿ ಗ್ಯಾರಂಟಿ ಯೋಜನೆಗಳು ಮಹತ್ವದ್ದಾಗಿದ್ದು, ಕಾನೂನು ಸಚಿವ ಎಚ್.ಕೆ. ಪಾಟೀಲರ ಮಾರ್ಗದರ್ಶನದಂತೆ ಗದಗ ಮತಕ್ಷೇತ್ರದಲ್ಲಿ ಯಾರೊಬ್ಬರೂ ಹಸಿವಿನಿಂದ ಬಳಲಬಾರದು. ಸರ್ಕಾರದ ಯೋಜನೆಗಳು ಯಾವುದೇ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ನೇರವಾಗಿ ಜನರಿಗೆ ತಲುಪಲು ಜನರ ಬಳಿಯೇ ಸಭೆ ಮಾಡುವ ಮೂಲಕ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡುವ ನಿಟ್ಟಿನಲ್ಲಿ ಅಧಿಕಾರಿಗಳ ಸಮೇತ ಗ್ರಾ.ಪಂ ಮಟ್ಟದಲ್ಲಿ ಸಭೆ ನಡೆಸಿ, ಜನರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ ಎಂದರು.
ತಾ.ಪಂ ಮಾಜಿ ಅಧ್ಯಕ್ಷ ಬಿ.ಆರ್. ದೇವರಡ್ಡಿ ಮಾತನಾಡಿ, ಜನರ ಬಳಿಗೆ ಸರ್ಕಾರ ಎನ್ನುವ ಕಲ್ಪನೆಯ ಮೂಲಕ ಸರ್ಕಾರದ ಹಲವು ಯೋಜನೆಗಳು ಹಾಗೂ ಪಂಚ ಗ್ಯಾರಂಟಿ ಅನುಷ್ಠಾನ ಮಾಡುವ ಮೂಲಕ ಬಡವರ ಬದುಕು ಹಸನಾಗಬೇಕು, ಆ ನಿಟ್ಟಿನಲ್ಲಿ ಸಮಾಜದ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಯಿಂದ ಜಾರಿಗೆ ಬಂದ ಯೋಜನೆಗಳು ಜನೋಪಕಾರಿಯಾಗಿವೆ ಎಂದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸದಸ್ಯರಾದ ದಯಾನಂದ ಪವಾರ, ಸಾವಿತ್ರಿ ಹೂಗಾರ, ನಿಂಗಪ್ಪ ದೇಸಾಯಿ, ಗ್ರಾ.ಪಂ ಅಧ್ಯಕ್ಷ ಉಳಿಯಪ್ಪ ಬಸಪ್ಪ ಸಿಗ್ಲಿ, ಉಪಾಧ್ಯಕ್ಷೆ ಸುಮಾ ಶಿವಾನಂದ ತಳವಾರ, ಸದಸ್ಯರಾದ ಹಜರೇಸಾಬ ಹುಸೇನ್‌ಸಾಬ ನದಾಫ್, ಗವಿಯಪ್ಪ ಪೂಜಾರ, ಕುಬೇರಪ್ಪ ರಾಠೋಡ, ವೆಮು ಬಾಗಲಕೋಟಿ, ಸುರೇಶ ಪವಾರ, ಅಲ್ಲಾಸಾಬ ಪೀರಖಾನವರ, ಹನಮವ್ವ ಶಿದ್ನೆಕೋಪ್ಪ, ಸರಸ್ವತಿ ಮರಬರಡ್ಡಿ, ಪಾರವ್ವ ಗೋರವರ, ಹನುಮವ್ವ ಗುಡಿಮನಿ, ಗೌರಿ ತೋಟದ, ಕವಿತಾ ಪವಾರ್, ಮೀರಾಬಾಯಿ ಲಮಾಣಿ, ಹಿರಿಯರಾದ ಐ.ಬಿ. ಬಿಂಕದಕಟ್ಟಿ, ಶಾರದಾ ತೋಟದ, ಕೆ.ಎಂ. ಗೋವಿಂದರಡ್ಡಿ, ಗೋವಿಂದರಡ್ಡಿ ಕುಷ್ಟರಡಿ, ರೈಮನಸಾಬ್ ನದಾಫ್, ಅಡಿವೆಪ್ಪ ಮರಿಹನಮರಡ್ಡಿ, ನಾರಾಯಣ ಮರಡ್ಡಿ, ಉಳಿವೆಯಪ್ಪ ಮಡಿವಾಳರ, ಗೋವಿಂದಗೌಡ್ರು ಭರಮಗೌಡ್ರು, ಪ್ರಕಾಶ್ ಬಾಬು ಮರಡ್ಡಿ, ಕನಕಪ್ಪ ಬೇವಿನಮರದ, ಬಸವರಾಜ ಹಾದಿಮನಿ, ಹಾಲಪ್ಪ ಮಾದರ, ಧರ್ಮಪ್ಪ ರಾಥೋಡ, ದೇವಪ್ಪ ಕುರ್ತಕೋಟಿ, ಮಾಂತೇಶ ತೋಟದ, ತಾವರಪ್ಪ ಮಾಣಿ, ಮೈಲಾರಪ್ಪ ಚಲವಾದಿ, ಶಿವಾನಂದ ತಳವಾರ, ಸುಲೇಮಾನ ಸಾಬ ನದಾಫ್, ಧರ್ಮಪ್ಪ ಕೆಂಚಣ್ಣವರ, ಮುತ್ತಪ್ಪ ಮಲ್ಲಮ್ಮನವರ, ಶಂಭು ಕಾಳೆ, ಮಲ್ಲು ಬಾರಕೇರ ಮುಂತಾದವರಿದ್ದರು.
ಗದಗ ತಾಲೂಕು ಗ್ಯಾರಂಟಿ ಯೋಜನಾ ಪ್ರಾಧಿಕಾರದ ಸದಸ್ಯ ಕೆ.ಎಚ್. ಪಾಟೀಲ ಮಾತನಾಡಿ, ಬಡ ಜನರು ನೆಮ್ಮದಿಯಿಂದ ಬದುಕಬೇಕು. ಅವರದೂ ಸ್ವಾಭಿಮಾನದ ಜೀವನವಾಗಬೇಕು. ಗ್ರಾಮಾಂತರ ಪ್ರದೇಶಗಳಲ್ಲಿ ಗುಣಮಟ್ಟದ ಶಿಕ್ಷಣ, ಅನ್ನ, ಆರೋಗ್ಯ, ಉದ್ಯೋಗ ಸೇರಿದಂತೆ ಹಕ್ಕಿನ ಬದುಕು, ನೆಮ್ಮದಿಯ ವಾತಾವರಣ ನಿರ್ಮಾಣವಾಗುವ ಮೂಲಕ ಗ್ರಾಮಗಳು ಆದರ್ಶವಾಗಬೇಕು. ಗ್ಯಾರಂಟಿ ಯೋಜನೆಗಳು ಸದುಪವಾಗಬೇಕೆನ್ನುವ ಉದ್ದೇಶದೊಂದಿಗೆ ಆಡಳಿತವನ್ನು, ಗ್ಯಾರಂಟಿ ಪ್ರಾಧಿಕಾರವನ್ನು ಜನರ ಬಳಿಗೆ ತರಲಾಗುತ್ತಿದೆ ಎಂದರು.