ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ : ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಛೇರಿ, ಹುಬ್ಬಳ್ಳಿಯಲ್ಲಿ ಸೋಮವಾರ ವೀರ ವನಿತೆ ಒನಕೆ ಓಬವ್ವ ಜಯಂತಿಯ ಅಂಗವಾಗಿ ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಾಂಗಾ ಎಂ ಅವರು ವೀರವನಿತ ಒನಕೆ ಓಬವ್ವ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿಗಳಾದ ಪಿ.ವೈ. ನಾಯಕ, ಒಬ್ಬ ಸಾಮಾನ್ಯ ಮಹಿಳೆ ತನ್ನ ರಾಜ್ಯವನ್ನು ಹೇಗೆ ಕಾಪಾಡಬಹುದು ಎಂಬುದನ್ನು ತೋರಿಸಿಕೊಟ್ಟ ವೀರನಾರಿ ಒನಕೆ ಓಬವ್ವಳು ಹೈದರಾಲಿ ಸೈನಿಕರನ್ನು ಒನಕೆಯಿಂದ ಹೊಡೆದುರುಳಿಸಿ ಸಾಹಸ ಮೆರೆದವಳು.
ವೀರ ವನಿತೆ ಓಬವ್ವಳ ಜಯಂತಿ ಆಚರಣೆ ಮಾಡುವ ಮೂಲಕ ಅವರ ಧೈರ್ಯ ಹಾಗೂ ಸಾಹಸ ಬಗ್ಗೆ ತಿಳಿದುಕೊಂಡು ನಮ್ಮ ಜೀವನದಲ್ಲಿಯೂ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಅವಶ್ಯವಾಗಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಇಲಾಖಾ ಮುಖ್ಯಸ್ಥರಾದ ವಿವೇಕಾನಂದ ವಿಶ್ವಜ್ಞ, ವಿಜಯಶ್ರೀ ನರಗುಂದ, ಪ್ರಸನ್ನಕುಮಾರ ಕೆ.ಬಾಲಾನಾಯಕ್, ಬಿ.ಬೋರಯ್ಯ, ಮಾಲತಿ ಎಸ್.ಎಸ್, ಜಗದಂಬಾ ಕೋಪರ್ಡೆ, ಅಧಿಕಾರಿಗಳಾದ ಜಿ. ವಿಜಯಕುಮಾರ, ಎಂ.ಬಿ. ಕಪಲಿ, ಜಿ. ಹನುಮನಗೌಡ, ಶಿವಾನಂದ ನಾಗಾವಿ, ತೈಸಿನಬಾನು ಪಟವೇಗಾರ ಮತ್ತು ಕೇಂದ್ರ ಕಛೇರಿಯ ಇನ್ನಿತರ ಅಧಿಕಾರಿ/ಸಿಬ್ಬಂದಿಗಳು ಉಪಸ್ಥಿತರಿದ್ದರು. ವಿರೂಪಾಕ್ಷ ಕಟ್ಟಿಮನಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.