ಬೆಳಗಾವಿ: ಒಂದು ಜಾತಿ, ಧರ್ಮವನ್ನು ಕಮ್ಮಿ ತೋರಿಸುವ ಕೆಲಸ ಮಾಡಬಾರದು ಎಂದು ಸಂಸದ ಜಗದೀಶ್ ಶೆಟ್ಟರ್ ಜಾತಿ ಗಣತಿ ವರದಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು,
Advertisement
ಈ ವರದಿಯಲ್ಲಿ ನೈಜತೆ ಇಲ್ಲ. ವೈಜ್ಞಾನಿಕವಾಗಿ ಜಾತಿ ಗಣತಿಯಾಗಬೇಕು. ಒಂದು ಜಾತಿ, ಧರ್ಮವನ್ನು ಕಮ್ಮಿ ತೋರಿಸುವ ಕೆಲಸ ಮಾಡಬಾರದು. ಇದಕ್ಕೆ ನಮ್ಮ ವಿರೋಧವಿದೆ ಎಂದು ಹೇಳಿದ್ದಾರೆ.ಜಾತಿ ಗಣತಿ ಬಗ್ಗೆ ಸಂಪುಟದಲ್ಲಿ ಒಪ್ಪಿಗೆ ಕೊಟ್ಟಿದ್ದಾರೆ. ಅಲ್ಲದೇ ಏ.17ರಂದು ವಿಸ್ತೃತ ಚರ್ಚೆಗೆ ಸಂಪುಟ ಸಭೆ ಕರೆದಿದ್ದಾರೆ.
ಆದರೆ, ಈ ವರದಿಯೇ ಗೊಂದಲದಿಂದ ಕೂಡಿದೆ. ಪ್ರತಿಯೊಬ್ಬರ ಮನೆಗೆ ಹೋಗಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಅದೇ ರೀತಿ ಡಿಸಿಎಂ ಡಿ.ಕೆ. ಶಿವಕುಮಾರ ಹಾಗೂ ಸಚಿವರ ನಿಲುವು ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಹೇಳಿದ್ದಾರೆ.