ಆನ್ ಲೈನ್ ಜೂಜಾಟದ ಹುಚ್ಚು: ನೇಣು ಬಿಗಿದುಕೊಂಡು ಹೆಡ್ ಕಾನ್ ಸ್ಟೇಬಲ್ ಆತ್ಮಹತ್ಯೆ!

0
Spread the love

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೆಡ್ ಕಾನ್ಸ್ಟೇಬಲ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

Advertisement

ರಾಜಶೇಖರ್ (45) ಮೃತ ದುರ್ಧೈವಿಯಾಗಿದ್ದು, ಠಾಣಾ ಆವರಣದಲ್ಲಿದ್ದ ಕ್ವಾಟ್ರಸ್ನಲ್ಲಿ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೊಬೈಲ್ ಆನ್ಲೈನ್ ಜೂಜಾಟಗಳಿಗೆ ದಾಸನಾಗಿದ್ದ ಕಾನ್ಸ್ಟೇಬಲ್ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದರು.

ಹಲವರ ಬಳಿ ಬಡ್ಡಿಗೆ ಕೈಸಾಲ ಮಾಡಿಕೊಂಡಿದ್ದರು. ಬಗ್ಗೆ ತನ್ನ ಪೋಷಕರ ಬಳಿ ಕಷ್ಟ ಹೇಳಿಕೊಂಡಿದ್ದರು. ಜೊತೆಗೆ ಪತ್ನಿಯ ಚಿನ್ನಾಭರಣವನ್ನ ಸಾಲ ತೀರಿಸಲು ಅಡವಿಟ್ಟಿದ್ದರು ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ. ಇನ್ನೂ ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್ಪಿ ಕುಶಲ್ ಚೌಕ್ಸೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here