ನೆಲಮಂಗಲ:- ಆನ್ಲೈನ್ ರಮ್ಮಿ ಹುಚ್ಚಾಟಕ್ಕೆ ಬಲಿಯಾಗಿ ಹಣ ಕಳೆದುಕೊಂಡ ವ್ಯಕ್ತಿ ಸೂಸೈಡ್ ಮಾಡಿಕೊಂಡ ಘಟನೆ ನೆಲಮಂಗಲದ ಅಡೇಪೇಟೆ ನಡೆದಿದೆ.
Advertisement
45 ವರ್ಷದ ಲಾರಿ ಮಾಲೀಕ ಚಂದ್ರಶೇಖರ್ ಮೃತ ವ್ಯಕ್ತಿ ಎನ್ನಲಾಗಿದೆ. ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಚಂದ್ರಶೇಖರ್ ಆನ್‌ಲೈನ್ ರಮ್ಮಿಯಲ್ಲಿ 5 ಲಕ್ಷಕ್ಕೂ ಹೆಚ್ಚು ರೂ. ಕಳೆದುಕೊಂಡಿದ್ದಾರೆ. ಸ್ನೇಹಿತರ ಬಳಿಯೂ ಸಾಲ ಮಾಡಿದ್ದ ಬಗ್ಗೆ ಮಾಹಿತಿ ಇದೆ. ಮನೆಯವರನ್ನು ತುಮಕೂರಿನ ಸಂಬಂಧಿಕರ ಮದುವೆಗೆ ಕಳಿಸಿ ಮನೆಯಲ್ಲಿ ಪತ್ನಿ ಸೀರೆ ಬಳಸಿ ಫ್ಯಾನ್‌ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.