ಬೆಂಗಳೂರು:– ಇಂದು ರಾಜ್ಯದಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಓಪಿಡಿ ಇಂದು ಬಂದ್ ಆಗಲಿದ್ದು, ತುರ್ತು ಸೇವೆಗಳು ಮಾತ್ರ ಲಭ್ಯವಿರಲಿವೆ.
ಕೋಲ್ಕತ್ತ ವೈದ್ಯೆಯ ಹತ್ಯೆ ಖಂಡಿಸಿ ಐಎಂಎ ಪ್ರತಿಭಟನೆಗೆ ಕರೆ ಕೊಟ್ಟಿದೆ. ಕೋಲ್ಕತ್ತದಲ್ಲಿ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಹತ್ಯೆಯನ್ನ ಖಂಡಿಸಿ ಇಂದು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಪ್ರತಿಭಟನೆಗೆ ಕರೆ ಕೊಟ್ಟಿದೆ.
ಐಎಂಎ ಕೊಟ್ಟಿರುವ ಕರೆಗೆ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ, ಖಾಸಗಿ ಆಸ್ಪತ್ರೆಗಳ ಒಕ್ಕೂಟ ಮತ್ತು ಹಲವು ವೈದ್ಯಕೀಯ ಅಸೋಸಿಯೇಶನ್‌ಗಳು ಬೆಂಬಲ ಕೊಟ್ಟಿದ್ದು, ಇಂದು ಬೆಳಗ್ಗೆ 6 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆಯವರೆಗೂ ಓಪಿಡಿ ಬಂದ್ ಆಗಲಿದೆ. ಅಂದರೆ 24 ಗಂಟೆಗಳ ಕಾಲ ಓಪಿಡಿ ಸೇವೆ ಸ್ಥಗಿತ ಆಗಲಿದೆ.
ಓಪಿಡಿ ಸೇವೆ ಬಂದ್ ಆಗುವ ಕಾರಣ ರೋಗಿಗಳು ಆಸ್ಪತ್ರೆಗೆ ಹೋದರೆ ಚಿಕಿತ್ಸೆ ಸಿಗುವುದಿಲ್ಲ. ತುರ್ತು ಸೇವೆ ಮಾತ್ರ ಲಭ್ಯವಿರಲಿದೆ.
ಇಂದು ಏನೆಲ್ಲಾ ಸೇವೆ ಇರುತ್ತೆ?
ಎಮರ್ಜೆನ್ಸಿ ಸೇವೆ
ಮೆಡಿಕಲ್ ಶಾಪ್ಸ್
ಇನ್ ಪೇಷೆಂಟ್ ಸೇವೆ
ಹೆರಿಗೆ, ಎಮರ್ಜೆನ್ಸಿ ಸರ್ಜರಿ
ಏನೆಲ್ಲ ಸೇವೆ ಇರೋದಿಲ್ಲ?
ಓಪಿಡಿ
ಡಯಾಲಿಸಿಸ್
ಕ್ಲಿನಿಕ್ ಸೇವೆ
ಮಕ್ಕಳ ಓಪಿಡಿ
ಡೆಂಟಲ್ ಸರ್ವಿಸ್
ಯಾರೆಲ್ಲ ಬೆಂಬಲ?
ಫನಾ ಬೆಂಬಲ ಖಾಸಗಿ ಆಸ್ಫತ್ರೆಗಳ ಒಕ್ಕೂಟ
ಸರ್ಕಾರಿ ವೈದ್ಯಾಧಿಕಾರಿಗಳ ಅಸೋಸಿಯೇಷನ್
ಮಕ್ಕಳ ವೈದ್ಯರ ಅಸೋಸಿಯೇಷನ್
ಅರ್ಥೋಪಿಟಿಕ್ ಅಸೋಸಿಯೇಷನ್
ಮೆಡಿಕಲ್ ಕಾಲೇಜ್ ವೈದ್ಯರ ಅಸೋಸಿಯೇಷನ್
ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಕೂಡ ಪ್ರತಿಭಟನೆಗೆ ಬೆಂಬಲ