ಬೆಟಗೇರಿ ಪೊಲೀಸರ ಕಾರ್ಯಾಚರಣೆ; ನಟ್-ಬೋಲ್ಟ್ ಕಳ್ಳತನ ಮಾಡಿದ್ದ ಇಬ್ಬರ ಬಂಧನ, ಎರಡು ಆಟೋ ಸೀಜ್!

0
Spread the love

ಮಹಮ್ಮದ್‌ಗೌಸ್@ ಬುಲ್ಲಿ ಹಾಗೂ ಮನ್ಸೂರ್ ಹುಸೇನ್ @ ಚೋಟ್ಯಾ ಬಂಧನ

Advertisement

ಗದಗ: ನಾಗಸಮುದ್ರ ಬಳಿಯ ನೆಟ್ ಬೋಲ್ಟ್ ಫ್ಯಾಕ್ಟರಿಯಲ್ಲಿ ಲಕ್ಷಾಂತರ ರೂ, ಮೌಲ್ಯದ ನಟ್ಟ- ಬೋಲ್ಟ್ ಕಳ್ಳತನ ಮಾಡಿದ್ದ ಬೆಟಗೇರಿಯ ಇಬ್ಬರು ಕಳ್ಳರನ್ನು ಬೆಟಗೇರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆಗಸ್ಟ್ 1ರಿಂದ 6ನೇ ತಾರೀಖಿನ ಒಳಗೆ ನಾಗಸಮುದ್ರ ಬಳಿಯ ನಟ್ ಬೋಲ್ಟ್ ಫ್ಯಾಕ್ಟರಿಯಲ್ಪಿ ಸುಮಾರು 4ಲಕ್ಷ 17ಸಾವಿರ ಮೌಲ್ಯದ ನಟ್-ಬೋಲ್ಟ್, ಡೈ‌ಗಳು ಹಾಗೂ ಸ್ಕ್ರೂಗಳು ಕಳ್ಳತನವಾದ ಬಗ್ಗೆ ಫ್ಯಾಕ್ಟರಿಯ ಸೂಪರ್ ವೈಸರ್ ವೀರುಪಾಕ್ಷಗೌಡ ತಂದೆ ಬಾಳನಗೌಡ ಹನಮಂತಗೌಡ್ರ ಎಂಬುವವರು ಬೆಟಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ಬೇಧಿಸಲು ಎಸ್ಪಿ ರೋಹನ್ ಜಗದೀಶ್, ಸಿಇಎನ್ ಠಾಣೆಯ ಡಿವೈಎಸ್ಪಿ ಮಹಾಂತೇಶ್ ಸಜ್ಜನ, ಗದಗ ಉಪವಿಭಾಗದ ಡಿವೈಎಸ್ಪಿ ಮುರ್ತುಜಾ ಖಾದ್ರಿ, ಸಿಪಿಐ ಧೀರಜ್ ಶಿಂಧೆ ಇವರ ಮಾರ್ಗದರ್ಶನದಲ್ಲಿ, ಬೆಟಗೇರಿ ಠಾಣೆಯ ಪಿಎಸ್ಐ ಎಲ್ ಎಂ ಆರಿ ನೇತೃತ್ವದಲ್ಲಿ, ಸಿಬ್ಬಂದಿಗಳಾದ ಎಸ್ ಎ ಗುಡ್ಡಿಮಠ, ಪಿ ಆರ್ ರಾಠೋಡ, ಕೆ ಡಿ ಜಮಾದಾರ, ಐ ಎ ಮಿರ್ಜಾ, ಎಂ ಎಸ್ ಗಾಣಿಗೇರ, ಎಸ್ ಡಿ ಬಳ್ಳಾರಿ, ಪಿ ಎ ಭರಮಗೌಡ್ರ, ಎಸ್ ಬಿ ಹಸವಿಮಠ, ಸಿ ಎನ್ ಮಾದರ, ಎನ್ ವಿ ಕಟ್ಟಿಮನಿ, ಜಗದೀಶ್ ಅಬ್ಬಿಗೇರಿ ಅವರನ್ನು ಒಳಗೊಂಡ ತಂಡವನ್ನು ರಚಿಸಲಾಗಿತ್ತು.

ಈ ತಂಡ ಕಾರ್ಯಾಚರಣೆ ನಡೆಸಿ, ಬೆಟಗೇರಿಯ ಕಣಗಿನಹಾಳ ರಸ್ತೆಯ ಕನ್ಯಾಳಾಗಸಿ ನಿವಾಸಿ ಮಹಮ್ಮದ್‌ಗೌಸ್ ಅಲಿಯಾಸ್ ಬುಲ್ಲಿ ತಂದೆ ರಾಜೇಸಾಬ ಬಾಗಲಕೋಟೆ ಹಾಗೂ ನರೇಗಲ್ಲನ ಬುಲ್ಡೋಜರ್ ನಗರದ ನಿವಾಸಿ, ಹಾಲಿ ವಸ್ತಿ ಕುರಟ್ಟಿಪೇಟೆಯ ಮನ್ಸೂರ್ ಹುಸೇನ್ ಅಲಿಯಾಸ್ ಚೋಟ್ಯಾ ತಂದೆ ಹುಸೇನಸಾಬ್ ಗೇಟಿನ ಎಂಬ ಇಬ್ಬರನ್ನು ಬಂಧಿಸಿ ಅವರಿಂದ ಕಳ್ಳತನ ಮಾಡಿದ್ದ 4ಲಕ್ಷ ,17 ಸಾವಿರ ರೂ.ಮೌಲ್ಯದ ನಟ್-ಬೋಲ್ಟ್ , ಡೈಗಳು ಹಾಗೂ ಸ್ಕ್ರೂಗಳನ್ನು ವಶಕ್ಕೆ ಪಡೆದುಕೊಂಡು, ಕೃತ್ಯಕ್ಕೆ ಬಳಿಸಿಕೊಂಡಿದ್ದ ಎರಡು ಆಟೋ ರಿಕ್ಷಾಗಳನ್ನು (ಕೆಎ-26/ಎ-8878 ಹಾಗೂ ಕೆಎ-20/ಡಿ-7872) ಜಪ್ತಿ ಮಾಡಲಾಗಿದೆ.

ವಿಶೇಷ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ ಬೆಟಗೇರಿ ಪೊಲೀಸರ ಕಾರ್ಯಕ್ಕೆ ಎಸ್ಪಿ ರೋಹನ್ ಜಗದೀಶ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here