ಗದಗ: ಕಳೆದ ವರ್ಷ ಗದಗ ನಗರದ ಹುಡ್ಕೋ ಕಾಲೋನಿಯಲ್ಲಿ ಮನೆ ಕಳ್ಳತನಕ್ಕೆ ಸಂಬಂಧಿಸಿದಂತೆ ಶಹರ ಠಾಣೆಯ ಪೊಲೀಸರು ಕುಖ್ಯಾತ ಅಂತರ್ ಜಿಲ್ಲಾ ಕಳ್ಳನನ್ನು ಬಂಧಿಸಿದ್ದಾರೆ.
ಧಾರವಾಡದ ಶ್ರೀರಾಮನಗರದ ನಿವಾಸಿ, ಸದ್ಯಕ್ಕೆ ಮಹಾರಾಷ್ಟ್ರದ ಮೀರಜ್‌ನಲ್ಲಿ ವಾಸವಾಗಿದ್ದ ಮೊಹಮ್ಮದ್ ಹುಸೇನ್ @ ಮಚ್ಚರ್@ ಹನಿಸಿಂಣ್ ತಂದೆ ಗೌಸ್ ಶೇಖ್ ಎಂಬಾತನನ್ನು ಬಂಧಿಸಲಾಗಿದೆ.
ಬಂಧಿತನಿಂದ 71500 ರೂ. ಮೌಲ್ಯದ 30 ಗ್ರಾಮ್ ಬಂಗಾರದ ಆಭರಣಗಳನ್ನು ಜಪ್ತಿ ಮಾಡಲಾಗಿದೆ.
08-09-2022 ರ ಸಂಜೆ ಗದಗ ನಗರದ ಹುಡ್ಕೋ ಕಾಲೋನಿಯ ಎರಡನೇ ಕ್ರಾಸ್ ನಲ್ಲಿ ಮನೆ ಕಳ್ಳತನ ನಡೆದಿದೆ ಎಂದು ಮಾಲೀಕರಾದ ದೀಪಕ್ ಪವಾರ್ ಎನ್ನುವವರು ಶಹರ ಠಾಣೆಗೆ ದೂರು ನೀಡಿದ್ದರು.
ಕಳ್ಳತನ ಪ್ರಕರಣ ಪತ್ತೆ ಮಾಡಲು ಗದಗ ಎಸ್ಪಿ ಬಿ.ಎಸ್. ನೇಮಗೌಡ ಹಾಗೂ ಅಂದಿನ ಡಿವೈಎಸ್ಪಿ ಎಮ್.ಬಿ.ಸಂಕದ ಅವರ ಮಾರ್ಗದರ್ಶನದಲ್ಲಿ ಶಹರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಡಿ.ಬಿ.ಪಾಟೀಲ್, ಪಿಎಸ್ಐ ಜಿ.ಟಿ ಜಕ್ಕಲಿ, ಎಎಸ್ಐ ವಾಯ್.ಬಿ. ಪಾಟೀಲ್, ಟೆಕ್ನಿಕಲ್ ಸೆಲ್‌ದ ಗುರು ಬೂದಿಹಾಳ, ಸಿಬ್ಬಂದಿಗಳಾದ ಎಸ್.ಎಸ್.ಮಾವಿನಕಾಯಿ,ಯು,ಎಫ್, ಸುಣಗಾರ,ಮೆಹಬೂಬ್ ವಡ್ಡಟ್ಟಿ, ಪ್ರವೀಣ್ ಕಲ್ಲೂರ, ಕೆ.ಡಿ.ಜಮಾದಾರ, ಪಿ.ಬಿ.ಮೂಲಿಮನಿ, ಅಂದಪ್ಪ ಹಣಜಿ, ಪಿ.ಎ.ಭರಮಗೌಡ್ರ, ವೀರಪ್ಪ ಗೌಡನಾಯ್ಕರ್ ತಂಡ ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಕಳ್ಳತನ ಪ್ರಕರಣ ಪತ್ತೆ ಹಚ್ಚಿದ ಅಧಿಕಾರಿ ಹಾಗೂ ಸಿಬ್ಬಂದಿಯ ಕಾರ್ಯವೈಖರಿಗೆ ಎಸ್ಪಿ ಬಿ.ಎಸ್. ನೇಮಗೌಡ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.