ಬೆಂಗಳೂರು:- ಅರಣ್ಯ ಅಧಿಕಾರಿಗಳು ಭರ್ಜರಿ ಕಾರ್ಯಚರಣೆ ನಡೆಸಿ ಇಬ್ಬರು ಆನೆ ದಂತ ಚೋರರನ್ನು ಅರೆಸ್ಟ್ ಮಾಡಿದ್ದಾರೆ.
ಮೋಹನ್, ಆನಂದ್ ಹಾಗೂ ವಿನೋದ್ ಬಂಧಿತರು ಎನ್ನಲಾಗಿದೆ. ಬಂಧಿತರಿಂದ ಬೆಲೆ ಬಾಳುವ 8.5 ಮತ್ತು 9 ಕೆ.ಜಿ ಎರಡು ಆನೆ ದಂತವನ್ನು ಜೊತೆಗೆ ಕೃತ್ಯಕ್ಕೆ ಬಳಸಲಾದ ಕಾರೊಂದನ್ನು ವಶಕ್ಕೆ ಪಡೆಯಲಾಗಿದೆ.
ಇಂದು ಬೆಳಗ್ಗೆ 10 ಗಂಟೆಯ ಸುಮಾರಿಗೆ ಬೆಂಗಳೂರಿಗೆ KA-53-D-9181 ವಾಹನ ಸಂಖ್ಯೆಯ ಕಾರೊಂದರಲ್ಲಿ ಅತ್ಯಂತ ಬೆಲೆ-ಬಾಳುವ ಎರಡು ಆನೆಯ ದಂತಗಳನ್ನು ಮಾರಾಟಕ್ಕಾಗಿ ತೆಗೆದುಕೊಂಡು ಹೋಗುತ್ತಿರುವ ಕುರಿತು ಬೆಂಗಳೂರು ನಗರ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಖಚಿತ ಮಾಹಿತಿ ಬರುತ್ತದೆ.
ಕೂಡಲೇ ಕಾರ್ಯಪ್ರವೃತ್ತರಾಗಿ, ಬೆಂಗಳೂರು ಮತ್ತು ಯಲಹಂಕ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿಗಳನ್ನು ಒಳಗೊಂಡ ಎರಡು ಪ್ರತ್ಯೇಕ ತಂಡಗಳನ್ನು ರಚಿಸಿಕೊಂಡು ಕಾಯುತ್ತಿದ್ದ ಸಮಯದಲ್ಲಿ ಬೆಂಗಳೂರು ವಲಯ ವ್ಯಾಪ್ತಿಯಲ್ಲಿ ವಾಹನವನ್ನ ತಡೆದು, ಪರೀಕ್ಷಿಸಲಾಗುತ್ತದೆ. ಈ ವೇಳೆ ವಾಹನದಲ್ಲಿ ಎರಡು ಆನೆ ದಂತಗಳು ಕಂಡುಬರುತ್ತವೆ. ಕೂಡಲೇ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.