ಭಾರತದ ಆಪರೇಷನ್ ಸಿಂಧೂರ’ಕ್ಕೆ ಪಾಕ್ ವಿಲ-ವಿಲ: ತುರ್ತು ಪರಿಸ್ಥಿತಿ ಘೋಷಣೆ!

0
Spread the love

ಇಸ್ಲಾಮಾಬಾದ್:- ಭಾರತದ ಆಪರೇಷನ್ ಸಿಂಧೂರ’ಕ್ಕೆ ತತ್ತರಿಸಿರುವ ಪಾಕಿಸ್ತಾನವು ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ ನಲ್ಲಿ ಪಾಕ್ ಉಗ್ರರು 26 ಭಾರತೀಯ ನಾಗರೀಕರನ್ನು ಹತ್ಯೆ ಮಾಡಿದ್ದು, ಇದೀಗ ಭಾರತವು ಪ್ರತೀಕಾರ ತೀರಿಸಿಕೊಂಡಿದೆ. ಹೌದು, ಭಾರತವು ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಪಾಕಿಸ್ತಾನದ 9 ಪ್ರದೇಶಗಳ ಮೇಲೆ ವಾಯು ದಾಳಿ ನಡೆಸಿ ಪಾಕಿಸ್ತಾನದ ವಿರುದ್ದ ಸೇಡು ತೀರಿಸಿಕೊಂಡಿದೆ. ಆದರೆ ಇತ್ತ ಪಾಕ್ ಭಾರತದ ದಾಳಿಯಿಂದ ನಲುಗಿ ಹೋಗಿದ್ದು, ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.

Advertisement

ಹೌದು, ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ `ಆಪರೇಷನ್ ಸಿಂಧೂರ’ ಹೆಸರಿನಲ್ಲಿ ಮಂಗಳವಾರ ತಡರಾತ್ರಿ 1:44ರ ಸುಮಾರಿಗೆ ಪಾಕ್‌ನ 9 ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿ, ಸೇಡು ತೀರಿಸಿಕೊಂಡಿದೆ. ಭಾರತದ ವಾಯುದಾಳಿಯಲ್ಲಿ 80ಕ್ಕೂ ಹೆಚ್ಚು ಉಗ್ರರು ಹತ್ಯೆಯಾಗಿದ್ದಾರೆ. ಹೀಗಾಗಿ ಪಾಕ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ. ಆದರೆ ಈ ಕುರಿತು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಪ್ರತಿಕ್ರಿಯಿಸಿದ್ದು, ಈ ದಾಳಿಯಲ್ಲಿ ಅಮಾಯಕ ಪಾಕಿಸ್ತಾನಿಗಳ ಜೀವಹಾನಿಯಾಗಿದೆ. ಪಾಕಿಸ್ತಾನಿಗಳ ಆತ್ಮರಕ್ಷಣೆಗಾಗಿ ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.


Spread the love

LEAVE A REPLY

Please enter your comment!
Please enter your name here