ನುರಿತ ತಂಡದಿಂದ ಬೀದಿ ನಾಯಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭ: ನಿಟ್ಟುಸಿರು ಬಿಟ್ಟ ಪುಟಾಣಿಗಳು, ಪಾಲಕರು

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ನಗರ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಅಟ್ಟಹಾಸ ಮಿತಿಮೀರಿದೆ. ಒಂದು ತಿಂಗಳಲ್ಲಿ ಮೂರು ಮಕ್ಕಳ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿವೆ. ರಕ್ಕಸ ನಾಯಿಗಳ ದಾಳಿಗೆ ಮಕ್ಕಳು ಆಸ್ಪತ್ರೆಗೆ ಒದ್ದಾಡುತ್ತಿದ್ದವು. ಇದೀಗ ಎಚ್ಚೆತ್ತಿರುವ ನಗರಸಭೆಯ ಅಧಿಕಾರಿಗಳು ಬೀದಿ ನಾಯಿಗಳನ್ನು ಸೆರೆಹಿಡಿಯುವ, ಸಂತಾನ ಹರಣ ಚಿಕಿತ್ಸೆಯು ನಡೆಸುವ ಕಾರ್ಯಾಚರಣೆ ಕೈಗೊಂಡಿದೆ.

Advertisement

ರೌಡಿ ನಾಯಿಗಳನ್ನು ಮಟ್ಟಹಾಕಲು, ಎಂಥಹ ಕಿಲಾಡಿ ನಾಯಿಗಳಿದ್ದರೂ ಕೂಡ ಕ್ಷಣಾರ್ಧದಲ್ಲಿ ಸೆರೆಹಿಡಿಯುವ ಉತ್ತರ ಪ್ರದೇಶದ ಅನಿಮಲ್ ರೈಟ್ಸ್ ಫಂಡ್ ಏಜೆನ್ಸಿಯ ನುರಿತ ತಂಡವನ್ನು ತರೆತರಲಾಗಿದ್ದು, ಶನಿವಾರದಿಂದ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ನಾಯಿ ಸೆರೆ ಕಾರ್ಯಾಚರಣೆಯನ್ನು ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿದರು.

ಬೀದಿ ನಾಯಿಗಳು ಚಿಕ್ಕ ಮಕ್ಕಳನ್ನೇ ಗುರಿಯಾಗಿಸಿ ದಾಳಿ ನಡೆಸುತ್ತಿದ್ದವು. ಇದರಿಂದ ಮಕ್ಕಳನ್ನು ಮನೆಬಿಟ್ಟು ಹೊರಗೆ ಕಳಿಸಲು ಪಾಲಕರು ಭಯಪಡುವ ಸ್ಥಿತಿ ನಿರ್ಮಾಣವಾಗಿತ್ತು. ಒಂದೇ ತಿಂಗಳಲ್ಲಿ ಮೂವರು ಮಕ್ಕಳ ಮೇಲೆ ದಾಳಿ ಮಾಡಿದ್ದ ಬೀದಿ ನಾಯಿಗಳು ಅವಳಿ ನಗರ ದ್ ಜನರಲ್ಲಿ ಭಯ ಹುಟ್ಟಿಸಿದ್ದವು, ನಗರಸಭೆಯ ನಿರ್ಲಕ್ಷ ಣಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದರು.

ಫೆಬ್ರುವರಿ 5ರಂದು ರಹಮತ್ ನಗರದಲ್ಲಿ 4 ವರ್ಷದ ಮಗುವಿನ ಮೇಲೆ ನಾಯಿಗಳು ದಾಳಿ ನಡೆಸಿ, ಮುಖ, ಕತ್ತು, ಎದೆ ಭಾಗವನ್ನು ಗಾಯಗೊಳಿಸಿದ್ದವು. ಸೆಪ್ಟಂಬರ್ 9ರಂದು ಗದಗ ನಗರದ ಪಂಚಾಳ ನಗರದಲ್ಲಿ 6 ವರ್ಷದ ಬಾಲಕಿಯ ಮೇಲೆ ದಾಳಿ ಮಾಡಿ ಕಣ್ಣು, ತಲೆ, ಕೈಗೆ ಕಚ್ಚಿ ನಾಯಿಗಳು ಅಟ್ಟಹಾಸ ಮೆರೆದಿದ್ದವು. ಅಕ್ಟೊಬರ್ 12ರಂದು ಬೆಟಗೇರಿಯ ಕುರಹಟ್ಟಿ ಪೇಟೆಯಲ್ಲಿ 6 ವರ್ಷದ ಬಾಲಕನ ಮೇಲೆ ದಾಳಿ ಮಾಡಿದ್ದವು. ಈಗ ಗದಗ-ಬೆಟಗೇರಿ ಅವಳಿ ನಗರದಲ್ಲಿನ ಬೀದಿ ನಾಯಿಗಳನ್ನು ಹಿಡಿದು, ಅವುಗಳಿಗೆ ಸಂತಾನ ಹರಣ ಚಿಕಿತ್ಸೆಯನ್ನು ನಡೆಯಿಸಿ ಆ್ಯಂಟಿ ರೇಬಿಸ್ ಲಸಿಕೆ ನೀಡಲಾಗುತ್ತಿದೆ.

ಗದಗ-ಬೆಟಗೇರಿ ಅವಳಿ ನಗರದಲ್ಲಿ ಸುಮಾರು 3 ಸಾವಿರ ಬೀದಿ ನಾಯಿಗಳಿವೆ ಎಂಬ ವಿಚಾರ ನಗರಸಭೆ ನಡೆಸಿದ ಸರ್ವೆಯಲ್ಲಿ ತಿಳಿದುಬಂದಿತ್ತು. ಮೊದಲ ಹಂತದಲ್ಲಿ 450 ನಾಯಿಗಳನ್ನು ಹಿಡಿಯಲಾಗುತ್ತಿದ್ದು, ಪ್ರತಿದಿನ 25 ನಾಯಿಗಳನ್ನು ಸೆರೆ ಹಿಡಿಯುವ ಯೋಜನೆ ರೂಪಿಸಲಾಗಿದೆ.
ಕಾರ್ಯಚರಣೆಯ ಸಂದರ್ಭದಲ್ಲಿ ಗದಗ-ಬೆಟಗೇರಿ ನಗರಸಭೆ ಸದಸ್ಯರಾದ ಚಂದ್ರು ಕರಿಸೋಮನಗೌಡ್ರ, ಇಮ್ತಿಯಾಜ್ ಶಿರಹಟ್ಟಿ, ನಗರಸಭೆ ಆಯುಕ್ತರಾದ ರಾಜಾರಾಮ್ ಪವಾರ್, ಸಹಾಯಕ ಕಾರ್ಯಪಾಲಕ ಅಭಿಯಂತರ (ಪರಿಸರ) ಆನಂದ್ ಬದಿ, ಹಿರಿಯ ಆರೋಗ್ಯ ನಿರೀಕ್ಷಕರಾದ ಎಂ.ಎ. ಮಕಾಂದಾರ್, ನಗರಸಭೆ ಸಿಬ್ಬಂದಿ ವರ್ಗದವರು ಹಾಗೂ ಅನಿಮಲ್ ರೈಟ್ಸ್ ಫಂಡ್ ಏಜೆನ್ಸಿಯವರು ಹಾಜರಿದ್ದರು.

ಗದಗ-ಬೆಟಗೇರಿ ಅವಳಿ ನಗರದಲ್ಲಿ ಹೆಜ್ಜೆ ಹೆಜ್ಜೆಗೂ ಬೀದಿ ನಾಯಿಗಳ ಗ್ಯಾಂಗ್ ನೋಡಿ ಜನರು ಭಯ ಪಡುತ್ತಯರು. ಎಲ್ಲಿ ನಮ್ಮ ಮೇಲೆ ದಾಳಿ ಮಾಡುತ್ತವೆಯೋ ಎಂಬ ಭಯದಲ್ಲಿ ಜನ ಓಡಾಡುತ್ತಯರು. ಈಗ ನಗರಸಭೆಯ ಆಪರೇಷನ್ ಡಾಗ್ ಕಾರ್ಯಾಚರಣೆಯಿಂದ ಅವಳಿ ನಗರದ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಅನುಂದ್ ಬದಿ.
ನಗರಸಭೆ ಅಭಿಯಂತರು, ಗದಗ.


Spread the love

LEAVE A REPLY

Please enter your comment!
Please enter your name here