ಕಾರ್ಯಾಚರಣೆಯ ವಿಶ್ಲೇಷಣಾ ಸಭೆ

0
Spread the love

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಕೇಂದ್ರ ಕಛೇರಿಯಲ್ಲಿ ವ್ಯವಸ್ಥಾಪಕರ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಕಾರ್ಯಾಚರಣೆಯ ವಿಶ್ಲೇಷಣಾ ಸಭೆ ಜರುಗಿತು.

Advertisement

ಸಭೆಯಲ್ಲಿ ಚಾಲನಾ ಸಿಬ್ಬಂದಿಗಳ ಬಳಕೆ ಉತ್ತಮಗೊಳಿಸುವುದು, ಅವಘಡ/ಅಪಘಾತ ರಹಿತ ಕಾರ್ಯಾಚರಣೆಗೆ ಒತ್ತು ನೀಡುವುದು, ಕೆ.ಎಂ.ಪಿ.ಎಲ್ ಸುಧಾರಿಸುವುದು ಇತ್ಯಾದಿ ವಿಷಯಗಳ ಕುರಿತು ಪ್ರಗತಿ ಪರಿಶೀಲಿಸಲಾಯಿತು.

ಈ ಸಭೆಯಲ್ಲಿ 01-04-2025ರಿಂದ 30-04-2025ರ ಮಾಹೆಯ ಅವಧಿಯಲ್ಲಿ ಶಕ್ತಿಯೇತರ ಸಾರಿಗೆ ಆದಾಯದ ಗುರಿ ಸಾಧನೆ ನೀಡಲಾಗಿತ್ತು. ಈ ಗುರಿ ಸಾಧನೆಯಲ್ಲಿ ಪ್ರಥಮ ಸ್ಥಾನ ಗದಗ ವಿಭಾಗ, ದ್ವಿತೀಯ ಸ್ಥಾನ ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ ವಿಭಾಗ ಮತ್ತು ತೃತೀಯ ಸ್ಥಾನವನ್ನು ಬೆಳಗಾವಿ ವಿಭಾಗದವರು ಗಳಿಸಿದ್ದು, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಗುರಿ ಸಾಧನೆ ಮಾಡಿದ ವಿಭಾಗಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

ಈ ಗುರಿ ಸಾಧನೆಗೆ ಕಾರಣಿಭೂತರಾದ ಹಿರಿಯ/ವಿಭಾಗೀಯ ನಿಯಂತ್ರಣಾಧಿಕಾರಿಗಳು, ವಿಭಾಗೀಯ ಸಂಚಾರ ಅಧಿಕಾರಿಗಳು, ವಿಭಾಗೀಯ ತಾಂತ್ರಿಕ ಶಿಲ್ಪಿಗಳು, ಘಟಕ ವ್ಯವಸ್ಥಾಪಕರುಗಳಿಗೆ ಹಾಗೂ ವಿಭಾಗದ ಎಲ್ಲ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಇಲಾಖಾ ಮುಖ್ಯಸ್ಥರಾದ ವಿವೇಕಾನಂದ ವಿಶ್ವಜ್ಞ, ಗಣೇಶ ರಾಠೋಡ, ಇಮಾಮ್ ಕಾಸೀಮ್ ಕಂದಗಲ್ಲ, ಎಂ.ಬಿ. ಕಪಲಿ, ಸುಮನಾ ಯು, ರವಿ ಅಂಚಿಗಾವಿ ಮತ್ತು ಎಲ್ಲ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು, ವಿಭಾಗೀಯ ಸಂಚಾರ ಅಧಿಕಾರಿಗಳು, ವಿಭಾಗೀಯ ತಾಂತ್ರಿಕ ಶಿಲ್ಪಿಗಳು, ಘಟಕ ವ್ಯವಸ್ಥಾಪಕರುಗಳು ಹಾಗೂ ಇನ್ನಿತರ ಅಧಿಕಾರಿ/ಸಿಬ್ಬಂದಿಗಳು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here