ವಿಜಯಸಾಕ್ಷಿ ಸುದ್ದಿ, ಗದಗ : ಗಜೇಂದ್ರಗಡ ಪಟ್ಟಣದ ತರಕಾರಿ ಮಾರುಕಟ್ಟೆ ಸ್ಥಳಾಂತರವನ್ನು ವಿರೋಧಿಸಿ, ಮೊದಲು ಇದ್ದ ವಾಡೆಯ ರಸ್ತೆಯ ಡಬಲ್ ರಸ್ತೆಯಲ್ಲಿಯೇ ಪುನಃ ಪ್ರಾರಂಭಿಸಬೇಕೆಂದು ರಾಣಿ ಚನ್ನಮ್ಮ ಪಕ್ಷದ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಪರಸಪ್ಪ ಬಿ.ಗಜ್ಜರಿ, ಗಜೇಂದ್ರಗಡ ತಾಲೂಕಾಧ್ಯಕ್ಷ ಮುತ್ತಣ್ಣ ಆರ್.ರಾಠೋಡ, ನಿಂಗನಗೌಡ ಹಾದಿಮನಿ, ಮಕ್ತುಂಸಾಬ ಯ.ನದಾಫ್ ಗದಗ ಜಿಲ್ಲಾಧಿಕಾರಿಗಳಿಗೆ ಹಾಗೂ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಪರಸಪ್ಪ ಗಜ್ಜರಿ, ಗಜೇಂದ್ರಗಡ ಪಟ್ಟಣ ವಾಡೆಯ ಡಬಲ್ ರೋಡ್ದಲ್ಲಿದ್ದ ಬೀದಿ ವ್ಯಾಪಾರಸ್ಥರ ತರಕಾರಿ ಮಾರುಕಟ್ಟೆಯನ್ನು ಎಪಿಎಂಸಿ ಎದುರಿಗೆ ಸ್ಥಳಾಂತರ ಮಾಡಿದ್ದು, ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿದೆ. ಈ ಹೊಸ ಸ್ಥಳಕ್ಕೆ ತೆರಳಲು ಸೂಕ್ತ ಬಸ್ ಸೌಕರ್ಯ ಇಲ್ಲ.
ವ್ಯಾಪಾರಸ್ಥರಿಗೂ ಸೂಕ್ತ ಸೌಲಭ್ಯಗಳಿಲ್ಲದೇ ಅನಾನುಕೂಲವಾಗುತ್ತಿದೆ. ಹೀಗಾಗಿ, ಈ ಮೊದಲು ಇದ್ದ ಜಾಗೆಯಲ್ಲಿಯೇ ತರಕಾರಿ ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ರಾಜು ಮಾಂಡ್ರೆ, ಜಗನ್ನಾಥ ಸಿದ್ದಲಿಂಗಪ್ಪ, ಶರಣಪ್ಪ ಮಾಗಿ, ಯಮನೂರಪ್ಪ ಭಜಂತ್ರಿ, ಫಕ್ಕೀರಗೌಡ ರಾಮನಗೌಡ ಪಾಟೀಲ, ರಂಗಪ್ಪ ತಳ್ಳಿಹಾಳ, ಮುತ್ತಣ್ಣ ಯಲಗುಂಚಿ, ಸುರೇಶ, ಉಮೇಶ ನಾವಡೆ, ಸತೀಶ ಎಂ.ಕಳ್ಳಿ ಮುಂತಾದವರು ಉಪಸ್ಥಿತರಿದ್ದರು.



