ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲೆಯ ಕಪ್ಪತ್ತಗುಡ್ಡದ ಪ್ರದೇಶದಲ್ಲಿರುವ ಶ್ರೀ ಕಪ್ಪತ್ತ ಮಲ್ಲೇಶ್ವರ ದೇವಸ್ಥಾನವು ವಂಶ ಪಾರಂಪರಿಕವಾಗಿದ್ದು, ಇದರ ವಾರಸುದಾರರರಾದ ಮಲ್ಲಿಕಾರ್ಜುನ ಸ್ವಾಮಿ ಮತ್ತು ಶ್ರೀಕಾಂತ ಸ್ವಾಮಿಗಳು ಸಮಾನ ಹಕ್ಕುಗಳನ್ನು ಹೊಂದಿದ್ದಾರೆ. ಇತ್ತೀಚೆಗೆ ಕೆಲ ಭಕ್ತರು ಸರಕಾರಿ ಅಧಿಕಾರಿಗಳ ಮೂಲಕ ಒತ್ತಡ ಹೇರಿ, ದೇವಸ್ಥಾನವು ಮಲ್ಲಿಕಾರ್ಜುನ ಸ್ವಾಮಿಗಳಿಗೆ ಮಾತ್ರ ಸೇರಿದ್ದು ಎಂದು ಹೇಳುತ್ತಿದ್ದಾರೆ.
ಕಾಕತಾಳೀಯವೆಂಬತೆ ತಹಸೀಲ್ದಾರರು ಕೂಡ ಅವರ ಪರವಾಗಿಯೇ ಮಾತನಾಡುತ್ತಿದ್ದು, ಆಗಸ್ಟ್ 14ರಂದು ನಡೆಯಲಿರುವ ಜಾತ್ರಾ ಮಹೋತ್ಸವಕ್ಕೆ ಕೆಲ ಭಕ್ತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ತಹಸೀಲ್ದಾರರು ಒಬ್ಬರ ಪರವಾಗಿ ನಿಂತಿರುವುದನ್ನು ವಿರೋಧಿಸಿ ದಲಿತ ಮಿತ್ರ ಮೇಳದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಸಮಸ್ಯೆಯನ್ನು ಬಗೆಹರಿಸಿ ಇಬ್ಬರಿಗೂ ಸಮ ಬಾಳು-ಸಮ ಪಾಲು ನೀಡಿ ಜಾತ್ರಾ ಮಹೋತ್ಸವವನ್ನು ಸುಗಮವಾಗಿ ನಡೆಸಲು ಅನೂಕೂಲ ಮಾಡಿಕೊಂಡಬೇಕೆಂದು ಮನವಿಯಲ್ಲಿ ವಿನಂತಿಸಿದರು. ಈ ಸಂದರ್ಭದಲ್ಲಿ ದಲಿತ ಮಿತ್ರ ಮೇಳದ ಅಧ್ಯಕ್ಷ ಕುಮಾರ್ ನಡಗೇರಿ, ಹುಲಗಪ್ಪ ವಾಲ್ಮೀಕಿ, ಸದಾನಂದಸಿಂಗ್ ಗುರುಲಹೂಸುರ್, ಮಂಜುನಾಥ್ ಬಂಡಿವಡ್ಡರ್, ವಿಶಾಲ್ ಗೋಕಾವಿ, ಕೃಷ್ಣಾ ಹುಯಿಲಗೋಳ, ಪಂಚಾಕ್ಷರಿ ಸಾಲಿಮಠ, ನಿಖಿಲ್ ಕೋಟಿ, ರವಿ ಬಂಡಿವಡ್ಡರ, ಆನಂದ ಹುಡೇದ, ಪ್ರಭು ಭಂಗಿ, ಪ್ರವೀಣ ಹುಡೇದ, ಶಿವು ಬಂಗಾರಿ, ಅಕ್ಷಯ್ ವಡ್ಡರ ಮುಂತಾದವರು ಇದ್ದರು.