ಲೇಬರ್ ಕೋಡ್ ಜಾರಿಗೆ ವಿರೋಧ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ (ಸಿ.ಐ.ಟಿ.ಯು) ಗದಗ ಜಿಲ್ಲೆ ವತಿಯಿಂದ ಲೇಬರ್ ಕೋಡ್ ಜಾರಿ ವಿರೋಧಿಸಿ, ಗ್ರಾಮ ಪಂಚಾಯಿತಿ ನೌಕರರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಗರದ ಮಹಾತ್ಮ ಗಾಂಧಿ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿ, ಗದಗ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾ.ಪಂ ನೌಕರರ ಸಂಘದ ರಾಜ್ಯ ಸಮಿತಿ ಉಪಾಧ್ಯಕ್ಷ ರುದ್ರಪ್ಪ ಕಂದಗಲ್ಲ, ಕೇಂದ್ರ ಸರ್ಕಾರವು 2019-20ರ ಪಾರ್ಲಿಮೆಂಟ್‌ನಲ್ಲಿ ನಾಲ್ಕು ಲೇಬರ್ ಕೋಡ್‌ಗಳನ್ನು ಅಂಗೀಕರಿಸಿ, ಈ ಸಂಹಿತೆಗಳಲ್ಲಿರುವ ಹಲವು ಕಾರ್ಮಿಕ ವಿರೋಧಿ ಅಂಶಗಳನ್ನು ರಾಜ್ಯ ಸರ್ಕಾರಗಳ ಮೂಲಕ ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಿ ಜಾರಿಗೆ ತರುವ ಹಿಂಬಾಗಿಲಿನ ಪ್ರಯತ್ನವನ್ನು ಮಾಡುತ್ತಿದೆ.

ಈ ತಿದ್ದುಪಡಿಗಳು ಜಾರಿಯಾದಲ್ಲಿ ಗ್ರಾ.ಪಂಗಳಲ್ಲಿ ದುಡಿಯುತ್ತಿರುವ ಬಹುತೇಕ ನೌಕರರು ರಕ್ಷಣೆ ಕಳೆದುಕೊಂಡು ಅತಂತ್ರರಾಗಬೇಕಾಗುತ್ತದೆ. ಆದ ಕಾರಣ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ವತಿಯಿಂದ ರಾಜ್ಯಾದ್ಯಂತ ಈ ನಾಲ್ಕು ಲೇಬರ್ ಕೋಡ್‌ಗಳನ್ನು ಜಾರಿ ಮಾಡಬಾರದೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಈ ಪ್ರತಿಭಟನೆಯ ಮೂಲಕ ಒತ್ತಾಯಿಸುತ್ತಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಮುಖಂಡರಾದ ರುದ್ರಗೌಡ ಸಂಕನಗೌಡ್ರ, ಸಿದ್ದಪ್ಪ ಶ್ಯಾಗೋಟಿ, ತಾಲೂಕು ಸಮಿತಿ ಅಧ್ಯಕ್ಷ ಮಹಾಂತೇಶ ದಡವಾಡ, ಕಾರ್ಯದರ್ಶಿ ಪ್ರಕಾಶ ಬೋಕಣ್ಣ, ಖಜಾಂಚಿ ಶಿವಾನಂದ ಚಲವಾದಿ, ನೀಲಮ್ಮ ಭಾರದ್ವಾಡ, ಉಪಾಧ್ಯಕ್ಷ ದೇವಪ್ಪ ಕಲ್ಮನಿ, ರುಕ್ಮೀಣಿ ಮಿನಗನವರ, ಶಾರದಾ ಹುನಗುಂದ, ಬಸಯ್ಯ ಜಂಗಮಠ, ಈಶ್ವರ ಪಟ್ಟಣಶೆಟ್ಟಿ, ಮಂಜುನಾಥ ಹೊಂಬಳ, ಹನುಮಂತ ಹೊಂಬಳ, ರಮೇಶ ಲಮಾಣಿ, ಗಿರೀಶ ಮುಕ್ಕಣ್ಣವರ, ಅಶ್ವಿನಿ ದಳವಾಯಿ, ಅಕ್ಕಮ್ಮ ಜಗ್ಗಲ, ರಾಮಣ್ಣ ಮ್ಯಾಗೇರಿ, ಶಿವಯೋಗಿ ನಂದಿಕೋಲಮಠ, ಮುತ್ತಪ್ಪ ತಳಕಲ್ಲ, ಅಲ್ಲಾಭಕ್ಷಿ ಹಳ್ಳಿಕೇರಿ, ಚಂದ್ರು ಗಾಜಿ ಇನ್ನಿತರರು ಉಪಸ್ಥಿತರಿದ್ದರು.

ಗ್ರಾಮ ಪಂಚಾಯಿತಿ ನೌಕರರ ಪ್ರಮುಖ ಬೇಡಿಕೆಗಳಾದ ಕನಿಷ್ಠ ವೇತನ ಕರಡು ಅಧಿಸೂಚನೆಯಲ್ಲಿ ರೂ. 31,000 ನಿಗದಿಪಡಿಸಬೇಕು, ಸೇವಾ ಹಿರಿತನ ಭತ್ಯೆ ಹೆಚ್ಚಳ, ಪಿಂಚಣಿ, ಆರೋಗ್ಯ ವಿಮೆ ಜಾರಿ, ಪಂಚಾಯಿತಿಗೊಂದು ಎಸ್.ಡಿ.ಎ ಮತ್ತು ಎರಡನೇ ಡಿ.ಇ.ಓ ನೇಮಕಾತಿ, ಸ್ವಚ್ಛವಾಹಿನಿಯರ ಒಡಂಬಡಿಕೆ ರದ್ದು, ತರಬೇತಿ ಪಡೆದ ಎಲ್ಲರಿಗೂ ಕಡ್ಡಾಯ ಕೆಲಸ, ರೂ. 7500 ಗೌರವ ಧನ ನೀಡುವಂತೆ ಪ್ರತಿಭಟನಾಕಾರರು ಸರ್ಕಾರವನ್ನು ಒತ್ತಾಯಿಸಿದರು.


Spread the love

LEAVE A REPLY

Please enter your comment!
Please enter your name here