ಅವೈಜ್ಞಾನಿಕ ಒಳಮೀಸಲಾತಿ ನೀತಿಗೆ ವಿರೋಧ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಪರಿಶಿಷ್ಟ ಜಾತಿಗಳಲ್ಲಿನ ಅವೈಜ್ಞಾನಿಕ ಒಳಮೀಸಲಾತಿ ವರ್ಗೀಕರಣದ ವಿರುದ್ಧವಾಗಿ ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ ಹಾಗೂ ಜಿಲ್ಲಾ ಬಂಜಾರ ಸಮುದಾಯದ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನಗರದ ಗಾಂಧಿ ವೃತ್ತದಲ್ಲಿ ಸೋಮವಾರದಿಂದ ಪ್ರಾರಂಭವಾಗಿರುವ ಪ್ರತಿಭಟನೆ ಮತ್ತು ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಗುರುವಾರವೂ ಮುಂದುವರಿಯಿತು.

Advertisement

ಧರಣಿಯಲ್ಲಿ ಜಿಲ್ಲೆಯ ವಿವಿಧ ತಾಂಡಾಗಳ ನೂರಾರು ಜನರು ಪಾಲ್ಗೊಂಡು ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಗುರುವಾರ ಗದಗ ಜಿಲ್ಲೆಯ 72 ತಾಂಡಾಗಳ ಪೈಕಿ ಗದಗ ತಾಲೂಕಿನ ಪಾಪನಾಶಿ ತಾಂಡಾ, ಮುಂಡರಗಿ ತಾಲೂಕಿನ ಕಕ್ಕೂರ ತಾಂಡಾ, ಶಿರಹಟ್ಟಿ ತಾಲೂಕಿನ ವರವಿ ತಾಂಡಾ, ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಮತ್ತು ಮುನಿಯನ್ ತಾಂಡಾ, ಗಜೇಂದ್ರಗಡ ತಾಲೂಕಿನ ಬೈರಾಪೂರ ತಾಂಡಾ ಹಾಗೂ ನರಗುಂದ ತಾಲೂಕಿನ ಹಾಲಭಾವಿ ತಾಂಡಾಗಳ ಬಂಜಾರರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಹಿಂದಿನ ಕಾಲದಲ್ಲಿ ಹೊಟ್ಟೆಪಾಡಿಗಾಗಿ ದಟ್ಟ ಅಡವಿಗಳು ಮತ್ತು ಬೆಟ್ಟ-ಗುಡ್ಡಗಳಲ್ಲಿ ನೈಸರ್ಗಿಕವಾಗಿ ದೊರೆಯುತ್ತಿದ್ದ ಅತ್ತಿ ಹಣ್ಣು, ಕವಳೆ ಹಣ್ಣು ಹಾಗೂ ಬಾದಿ ಹುಲ್ಲು ಮುಂತಾದವುಗಳನ್ನು ಮಾರಾಟ ಮಾಡುತ್ತಿದ್ದ ಬಂಜಾರರು, ಇದೇ ಪದ್ಧತಿಯನ್ನು ಪುನರಾವರ್ತಿಸಿ, ಬಾದಿ ಹುಲ್ಲು ಮಾರಾಟದ ಮೂಲಕ ಸರ್ಕಾರದ ಅವೈಜ್ಞಾನಿಕ ಒಳಮೀಸಲಾತಿ ನೀತಿಯನ್ನು ತೀವ್ರವಾಗಿ ವಿರೋಧಿಸಿದರು.

ಪ್ರತಿಭಟನೆಯಲ್ಲಿ ರವಿಕಾಂತ್ ಅಂಗಡಿ, ಸುರೇಶ್ ಮಹಾರಾಜ್, ಕೆ.ಸಿ. ನಬಾಪುರ, ಚಂದು ನಾಯಕ್, ಟಿ.ಡಿ. ಪೂಜಾರ, ಐ.ಎಸ್. ಪೂಜಾರ, ಧನುರಾಮ್ ತಂಬೂರಿ, ಗಣೇಶ್ ಕಟ್ಟಿಮನಿ, ಕೃಷ್ಣ ಲಮಾಣಿ, ಭೋಜಪ್ಪ ಲಮಾಣಿ, ರಾಮಪ್ಪ ನಾಯಕ್, ರಮೇಶ್ ಕಾರಭಾರಿ, ನಾರಾಯಣ ಪೂಜಾರ್, ವಸಂತ ನಾಯಕ್, ರಾಜಣ್ಣ ಕಾರಭಾರಿ, ಹನುಮಪ್ಪ ಡಾವ, ತಾವರಪ್ಪ ಲಮಾಣಿ, ಪರಮೇಶ ಲಮಾಣಿ, ಶಂಕರ್ ಕಾರಭಾರಿ, ಧರ್ಮ ಲಮಾಣಿ, ಪಾಂಡಪ್ಪ ಲಮಾಣಿ, ರಾಮಪ್ಪ ರಾಥೋಡ್, ಹರೀಶ್ ಕುಮಾರ್, ಶಿವಾನಂದ ಸೋಮಪ್ಪ ರಾಥೋಡ್, ಠಾಕರಪ್ಪ ರಾಥೋಡ್ ಸೇರಿದಂತೆ ತಾಂಡಾಗಳ ಯುವಕರು ಹಾಗೂ ತಾಯಂದಿರು ಭಾಗವಹಿಸಿದ್ದರು.

ಅವೈಜ್ಞಾನಿಕ ಒಳಮೀಸಲಾತಿ ವರ್ಗೀಕರಣದಿಂದ ಕೊಲಂಬೊ ಸಮುದಾಯಗಳಿಗೆ ಘೋರ ಅನ್ಯಾಯವಾಗಿದೆ. ಜಿಲ್ಲೆಯಲ್ಲಿ ಹೋರಾಟದ ಕಿಚ್ಚು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸರ್ಕಾರ ನಮ್ಮ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿ ಅನ್ಯಾಯವನ್ನು ಸರಿಪಡಿಸಬೇಕು.”
ರವಿಕಾಂತ್ ಅಂಗಡಿ,
ಬಂಜಾರ ಹಕ್ಕು ಸಂರಕ್ಷಣಾ ಸಮಿತಿಯ
ರಾಜ್ಯ ಪ್ರಧಾನ ಕಾರ್ಯದರ್ಶಿ.

ಶುಕ್ರವಾರ ಬೆಳದಡಿ, ಬಿಡನಾಳ, ಜಲ್ಲಿಗೇರಿ, ಉಂಡೇನಹಳ್ಳಿ ಮತ್ತು ಲಕ್ಕಲಕಟ್ಟಿ ತಾಂಡಾಗಳ ಬಂಜಾರರು ಬೆಳಿಗ್ಗೆ 11 ಗಂಟೆಗೆ ಗದಗ ನಗರದ ಚೆನ್ನಮ್ಮ ವೃತ್ತದಿಂದ ಸರ್ಕಾರದ ವಿರುದ್ಧ ‘ಪೊರಕೆ ಚಳವಳಿ’ ನಡೆಸಿ, ಜಿಲ್ಲಾಧಿಕಾರಿಗಳ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿ ಅಹೋರಾತ್ರಿ ಧರಣಿಯಲ್ಲಿ ಭಾಗವಹಿಸಲಿದ್ದಾರೆ.


Spread the love

LEAVE A REPLY

Please enter your comment!
Please enter your name here