ವಿಜಯಸಾಕ್ಷಿ ಸುದ್ದಿ, ಗದಗ : DSERT ಬೆಂಗಳೂರು ವತಿಯಿಂದ ನಡೆದ NMMS ಪರೀಕ್ಷೆಯಲ್ಲಿ ಹುಲಕೋಟಿಯ ಕೆ.ಎಚ್. ಪಾಟೀಲ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶಿಷ್ಯ ವೇತನಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ.
ಗದಗ ಗ್ರಾಮೀಣ ವಲಯದಲ್ಲಿ ಒಟ್ಟು 10 ವಿದ್ಯಾರ್ಥಿಗಳು NMMS ಶಿಷ್ಯ ವೇತನಕ್ಕೆ ಅರ್ಹರಾಗಿದ್ದು, ಸದರಿ 10 ವಿದ್ಯಾರ್ಥಿಗಳಲ್ಲಿ ಕೆ.ಎಚ್. ಪಾಟೀಲ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಹುಲಕೋಟಿಯ ಮೂವರು ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಸುನೀತಾ ಹಾಲಣ್ಣವರ ಗದಗ ತಾಲೂಕಿನ ಗ್ರಾಮೀಣ ವಲಯಕ್ಕೆ ಪ್ರಥಮ, ಸ್ಮಿತಾ ಹಿರೇಮಠ ದ್ವಿತೀಯ, ಸೃಷ್ಟಿ ದಿಂಡೂರ ಐದನೇ ಸ್ಥಾನ ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
NMMS ಶಿಷ್ಯ ವೇತನಕ್ಕೆ ಅರ್ಹರಾದ ಮೂವರು ವಿದ್ಯಾರ್ಥಿನಿಯರಿಗೆ ಹಾಗೂ NMMS ಪರೀಕ್ಷೆಗೆ ತರಬೇತಿ ನೀಡಿದ ಗಣಿತ ವಿಷಯದ ಶಿಕ್ಷಕರಾದ ಯೋಗಿಶ ಕುಮಾರ ಅವರಿಗೆ ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರು, ಸರ್ವ ಸದಸ್ಯರು, ಮುಖ್ಯೋಪಾಧ್ಯಾಯರು ಹಾಗೂ ಸರ್ವ ಸಿಬ್ಬಂದಿ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.